ಅಲಂಕಾರಗಳು

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲


 ಅಲಂಕಾರಗಳು

ಕಾವ್ಯಕ್ಕೆ ಶೋಭೆ ತರುವ ಧರ್ಮವೇ ಅಲಂಕಾರ. ಮಾತಿನ ಅಥವಾ ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಬಳಸುವ ಶಬ್ದ ಹಾಗೂ ಅರ್ಥ ಚಮತ್ಕಾರಗಳನ್ನು 'ಅಲಂಕಾರ' ಎನ್ನುವರು.

ಮುತ್ತೈದೆಯ ಹಣೆಯ ಕುಂಕುಮದಂತೆ ಕಂಡನು.
ಎಳೆಗಿಳಿಗಳ ಬಳಗಗಳು ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು.

ಅಲಂಕಾರದಲ್ಲಿ ಶಬ್ದಾಲಂಕಾರ ಮತ್ತು ಅಥರ್ಾಲಂಕಾರಗಳೆಂದು ಎರಡು ವಿಧಗಳಿವೆ.

ಶಬ್ದಾಲಂಕಾರ
ಮಾತಿನ ಅಥವಾ ಕಾವ್ಯದ ಸೌಂದರ್ಯವು ಶಬ್ದ ಅಥವಾ ಅಕ್ಷರಗಳ ಜೋಡಣೆಯ ಚಮತ್ಕಾರದಿಂದ ಹೆಚ್ಚಿದರೆ ಅದನ್ನು 'ಶಬ್ದಾಲಂಕಾರ' ಎನ್ನುವರು.

ಶಬ್ದಾಲಂಕಾರದಲ್ಲಿ ಮೂರು ವಿಧಗಳಿವೆ.
1. ಅನುಪ್ರಾಸ        2. ಯಮಕ        3. ಚಿತ್ರ ಕವಿತ್ವ.

ಮಾತಿನ ಅಥವಾ ಕಾವ್ಯದ ಸೌಂದರ್ಯವು ಅಕ್ಷರಗಳ ಪುನರಾವರ್ತನೆಯಿಂದ ಹೆಚ್ಚಿದರೆೆ ಅದನ್ನು 'ಅನುಪ್ರಾಸ' ಎನ್ನುವರು.

ಅನುಪ್ರಾಸದಲ್ಲಿ ವೃತ್ತ್ಯನುಪ್ರಾಸ ಮತ್ತು ಛೇಕಾನುಪ್ರಾಸ ಎಂದು ಎರಡು ವಿಧಗಳಿವೆ.

ಮಾತಿನ ಅಥವಾ ಕಾವ್ಯದ ಸೌಂದರ್ಯವು ಒಂದು ಅಥವಾ ಎರಡು ಅಕ್ಷರಗಳು ಪ್ರತಿಪಾದದಲ್ಲಿ ಪುನರಾವರ್ತನೆಯಾಗುವುದರಿಂದ ಹೆಚ್ಚಿದರೆ ಅದನ್ನು 'ವೃತ್ತ್ಯನುಪ್ರಾಸ' ಎನ್ನುವರು.

* ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು.

ಮಾತಿನ ಅಥವಾ ಕಾವ್ಯದ ಸೌಂದರ್ಯವು ಎರಡು ಅಕ್ಷರಗಳಿಂದ ಕೂಡಿದ ಪದಗಳು ಪ್ರತಿ ಪಾದದಲ್ಲಿಯೂ ಪುನರಾವರ್ತನೆಯಾಗುವುದರಿಂದ ಹೆಚ್ಚಿದರೆ ಅದನ್ನು 'ಛೇಕಾನುಪ್ರಾಸ' ಎನ್ನುವರು.

*     ಕೆಲದೊಳ್ ಪುಳಿಂದಿಯಿರೆ ಪೆ
    ಬರ್ುಲಿ ಬಂದೊಡಮಂಜನಳ್ಕ ನೋಡಂನೋಡುತಂ
    ಚಲದಿಂ ಕಾಡಂಕಾಡಂ
    ಸಲೆ ಪಸಿವಂ ಮರೆದು ತಣಿದು ಬೇಡಂಬೇಡಂ

ಮಾತಿನ ಅಥವಾ ಕಾವ್ಯದ ಸೌಂದರ್ಯವು ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳಿಂದ ಕೂಡಿದ ಪದಗಳು ಅಥವಾ ಪದಭಾಗ ಪ್ರತಿ ಪಾದದಲ್ಲಿಯೂ ಆದಿ / ಮಧ್ಯ / ಅಂತ್ಯದಲ್ಲಿ ನಿಯತವಾಗಿ ಪುನರಾವರ್ತನೆಯಾಗುವುದರಿಂದ ಹೆಚ್ಚಿದರೆ ಅದನ್ನು 'ಯಮಕಾಲಂಕಾರ'ಎನ್ನುವರು.

*     ಅಮಳ್ಗಳ್ ನಯವಿಕ್ರಮಗುಣ
ದಮಳ್ಗಳ್ ನೃಪಶಾಸ್ತ್ರ ಪರಿಣತರವರವರಂ ||
ಸಮರದೊಳಗಗ್ರ ಶೌರ್ಯಂ
ಸಮರಸ ಸಂಪನ್ನನಾವನುದಾರನಪ್ಪನ್ ||

ಮಾತಿನ ಅಥವಾ ಕಾವ್ಯದ ಸೌಂದರ್ಯವು ಅಕ್ಷರಗಳ ಅಥವಾ ಪದಗಳ ವಿಶಿಷ್ಟವಾದ ಬಳಕೆಯ ಮೂಲಕ ಹೆಚ್ಚಿದರೆ ಅದನ್ನು 'ಚಿತ್ರ ಕವಿತ್ವ'ಎನ್ನುವರು.ಇದರಲ್ಲಿ ನಿರೋಷ್ಟ್ಯ, ತಾಲವ್ಯ, ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಹಾರಬಂಧ, ಮುರಜಬಂಧ ಇತ್ಯಾದಿ ಪ್ರಕಾರಗಳಿವೆ.
 

 ದೃಷ್ಟಾಂತಾಲಂಕಾರ

ಎರಡು ಬೇರೆ ಬೇರೆ ವಾಕ್ಯಗಳು (ಉಪಮೇಯ, ಉಪಮಾನ) ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದನ್ನು 'ದೃಷ್ಟಾಂತಾಲಂಕಾರ.' ಎನ್ನುವರು.
ಉದಾ :-

ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ.
ಅಲಂಕಾರ    :     ದೃಷ್ಟಾಂತಾಲಂಕಾರ
ಲಕ್ಷಣ        :     ಎರಡು ಬೇರೆ ಬೇರೆ ವಾಕ್ಯಗಳು (ಉಪಮೇಯ, ಉಪಮಾನ) ಅರ್ಥ ಸಾದೃಶ್ಯದಿಂದ

ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು 'ದೃಷ್ಟಾಂತಾಲಂಕಾರ'.
ಉಪಮೇಯ     :    ಮಾತು ಬಲ್ಲವನಿಗೆ ಜಗಳವಿಲ್ಲ
ಉಪಮಾನ      :    ಊಟ ಬಲ್ಲವನಿಗೆ ರೋಗವಿಲ್ಲ    
ಸಮನ್ವಯ       :    ಇಲ್ಲಿ ಉಪಮೇಯವಾದ ಮಾತುಬಲ್ಲವನಿಗೆ ಜಗಳವಿಲ್ಲ ಹಾಗೂ ಉಪಮಾನವಾದ ಊಟ ಬಲ್ಲವನಿಗೆ ರೋಗವಿಲ್ಲ ಎರಡೂ ಬಿಂಬ ಪ್ರತಿಬಿಂಬದಂತೆ ಇರುವುದರಿಂದ ಇಬ್ಬರೂ ಒಂದೇ  ಎಂಬುದು ಪ್ರತಿಪಾದಿತವಾಗಿದೆ. ಆದ್ದರಿಂದ ಇದು ದೃಷ್ಟಾಂತಾಲಂಕಾರ.

ಉತ್ಪ್ರೇಕ್ಷಾಲಂಕಾರ

ಉಪಮೇಯವನ್ನು ಉಪಮಾನವನ್ನಾಗಿ ಸಂಭಾವಿಸಿ ಅಂದರೆ ಕಲ್ಪಸಿ ವರ್ಣಿಸಿದರೆ ಅದು ಉತ್ಪ್ರೇಕ್ಷಾಲಂಕಾರ.

* ಅಚ್ಛೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಅಲಂಕಾರ    :    ಉತ್ಪ್ರೇಕ್ಷಾಲಂಕಾರ
ಲಕ್ಷಣ    :    ಉಪಮೇಯವನ್ನು ಉಪಮಾನವನ್ನಾಗಿ ಸಂಭಾವಿಸಿ ಅಂದರೆ ಕಲ್ಪಸಿ ವರ್ಣಿಸಿದರೆ ಅದು  ಉತ್ಪ್ರೇಕ್ಷಾಲಂಕಾರ.
ಉಪಮೇಯ     :    ಅಚ್ಛೋದ ಸರೋವರ
ಉಪಮಾನ     :     ರನ್ನಗನ್ನಡಿ
ಸಮನ್ವಯ     :      ಉಪಮೇಯವಾದ ಅಚ್ಚೋದ ಸರೋವರವನ್ನು ಉಪಮಾನವಾದ  ರನ್ನಗನ್ನಡಿ ಎಂಬುದಾಗಿ  ಸಂಭಾವಿಸಿ (ಕಲ್ಪಿಸಿ) ವರ್ಣಿಸಲಾಗಿದೆ.
 

ಸ್ಥಳೀಯ ಸರಕಾರಗಳು
 -ಸ್ಥಳಿಯರ ಆಶೋತ್ತರ ಮತ್ತು ಕಲ್ಯಾಣವನ್ನು ಸಾಧೀಸುವುದಕ್ಕಗಿ ಸ್ಥಾಪಿಸಲಾದ ಸರ್ಕಾರ.  
- ಸ್ಥಾನಿಕ ಆಡಳಿತ ವ್ಯವಸ್ಥೆಯ ಅಸ್ತಿತ್ವ ವೇದಗಳ ಕಾಲದಿಂದಲೂ ಕಾಣಬಹುದು.
- ಚೋಳರ ಕಾಲದ ಉತ್ತರ ಮೇರೂರು ಶಾಸನ ಶ್ಥಳಿಯ ಆಡಳಿತ ಕುರಿತು ಮಾಹಿತಿ ನೀಡುತ್ತದೆ.( ಪರಾಂತಕ -1)
- ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಪ್ರಜಾಪತಿನಿಧಿ ಸಭೆಯನ್ನು ಆರಂಭಿಸಲಾಯಿತು.(1881)
- ಶ್ರೀ ಬಲವಂತರಾಯ ಮೆಹತಾ ಶಿಫಾರಸ್ಸನ್ನು ಮೊದಲಿಗೆ ಜಾರಿಗೆ ತಂದ ರಾಜ್ಯ- ರಾಜಸ್ಥಾನ.(ನಾಗೌರ್)
- ಎಲ್.ಎಮ್.ಸಿಂಘ್ವಿ ಸಮಿತಿ ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ಶಿಫಾರಸ್ಸು ಮಾಡಿತು.(1986)
- ಸಂವಿಧಾನದ 73(ಗ್ರಾಮೀಣ)&74(ನಗರ) ನೇ ತಿದ್ದುಪಡಿಗಳು ಸ್ಥಳಿಯ ಸರಕಾರದ ರಚನೆಗೆ ಸಂಬಂಧಿಸಿವೆ.
- ರಾಜ್ಯ ಸರಕಾರವು 'ಕಟಕ ಪಂಚಾಯತ್ ರಾಜ್' ಅಧಿನಿಯಮ-1993ನ್ನು 10,ಮೇ 1993ರಲ್ಲಿ ಜಾರಿಗಗೆ ತರಲಾಯಿತು.
- ಇದಕ್ಕನುಗುಣವಾಗಿ ಗ್ರಾಮ,ತಾಲ್ಲೂಕ&,ಜಿಲ್ಲಾಪಂಚಾಯತಗಳ ರಚನೆಮಾಡಲಾಯಿತು.
- ಗ್ರಾಮ ಪಂಚಾಯಿತಿ ರಚನೆ.
  - 5000 - 7000 ಜನಸಂಖ್ಯೆಗಳಿರುವ ಒಂದು / ಎರಡು - ಮೂರು ಗ್ರಾಮಗಳು ಸೇರಿ
   - ಮಲೆನಾಡು / ಬೆಟ್ಟ ಪ್ರದೇಶಗಳಲ್ಲಿ 2500 ಜನಸಂಖ್ಯೆ.  
  - ಅವಧಿ- 5 ವರ್ಷ
   - ಪ್ರತಿ 400 ಮತದಾರರ ವಾರ್ಢ್ಗೆ ಒಬ್ಬ ಸದಸ್ಯನ ಆಯ್ಕೆ.  
  ಪ್ರತಿ ಒಂದು ಪಂಚಾಯಿತಿಗೆ ಒಬ್ಬ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯನ್ನು ನೇಮಕ ಮಾಡಿದೆ
- ತಾಲೂಕ ಪಂಚಾಯಿತಿ ರಚನೆ  
- ಪ್ರತಿ 10,000 ಮತದಾರರಿಗೊಬ್ಬರಂತೆ ಸದಸ್ಯನ ಆಯ್ಕೆ ಅವಧಿ- 5 ವರ್ಷ
- ಜಿಲ್ಲಾ ಪಂಚಾಯಿತಿ:  
- ಈ ಹಿಂದೆ ಇವುಗಳನ್ನು ಜಿಲ್ಲಾ ಮಂಡಳಿಗಳು/ಸಮಿತಿಗಳೆಂದು ಕರೆಯುತ್ತಿದ್ದರು.
- ಜನಸಂಖ್ಯ ಆಧಾರದಮೇಲೆ ಜಿಲ್ಲೆಗಳ ಜನಪ್ರತಿನಿಧಿಗ ಆಯ್ಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
- ಪ್ರತಿ 40,000 ಜನಸಂಖ್ಯೆಗೊಬ್ಬ ಪ್ರತಿನಿಧಿ ಆಯ್ಕೆ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30,000 ಜನಸಂಖ್ಯೆಗೊಬ್ಬ ಪ್ರತಿನಿಧಿ ಆಯ್ಕೆ.
- ಕೊಡಗುವಿನಲ್ಲಿ ಪ್ರತಿ 18,000 ಜನಸಂಖ್ಯೆಗೊಬ್ಬ ಪ್ರತಿನಿಧಿ ಆಯ್ಕೆ.
- ಪ್ರತಿ ಜಿಲ್ಲೆಗೊಬ್ಬರಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸುತ್ತದೆ.

ನಗರ ಸ್ಥಳೀಯ ಸಂಸ್ಥೆಗಳು
- ನಗರವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ರಚಿಸಲಾಗಿದೆ.
- ವಿಧಗಳು;
- 1) ಪುರಸಭೆ:
- 20 ರಿಂದ 50 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ
- ಸಾಮಾನ್ಯವಾಗಿ 23-27 ಸದಸ್ಯರನ್ನು ಒಳಗೊಂಡಿರುತ್ತದೆ.( ಕೌನ್ಸಿಲರ್)
-  ಅವಧಿ- 5 ವರ್ಷ
-  2) ನಗರಸಭೆ:
- 50 ಸಾವಿರದಿಂದ 3 ಲಕ್ಷದೊಳಗಿನ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶ
- 31 ರಿಂದ 37 ಸದಸ್ಯರನ್ನು ಒಳಗೊಂಡಿರುತ್ತದೆ
-  ಅವಧಿ- 5 ವರ್ಷ
- 3) ಮಹಾನಗರ ಪಾಲಿಕೆ:
-  - 1976 ರ ಕರ್ನಾಟಕ ಮುನಿಸಿಪಲ್ ಕಾರ್ಪೋರೆಶನ್ ಕಾಯಿದೆ ಪ್ರಕಾರ ರಚನೆ.
- 2 ಲಕ್ಷಗಳಿಗೀಂತಲೂ ಹೆಚ್ಚು ಜನಸಂಖ್ಯೆ & ಕೋಟಿಗಿಂತಲೂ ಹೆಚ್ಚು ಆದಾಯವಿರುವ ಪ್ರದೇಶಗಳು.
-  - ಸಾಧಾರಣವಾಗಿ 30 - 100 ಸದಸ್ಯರನ್ನು ಒಳಗೋಂಡಿರುತ್ತದೆ.( ಕರ್ಪೋರೆಟರ್)
- ಅವಧಿ- 5 ವರ್ಷ
- ಮೇಯರ್ & ಉಪಮೇಯರ ಅಧೀಕಾರವಧಿ 1 ವರ್ಷ
- ಕರ್ನಾಟಕದಲ್ಲಿ 7 ಮಹಾನಗರ & 1 ಬೃಹತ್ ಮಹಾನಗರಪಾಲಿಕೆ ಇವೆ
- ಮೈಸೂರು, ಹುಬ್ಬಳ್ಳಿ-ಧಾರವಾಡ,ಬಳ್ಳಾರಿ, ಬೆಳಗಾವಿ,ಕಲಬುರಗಿ,ಮಂಗಳೂರು, ದಾವಣಗೆರೆ, & ಬೆಂಗಳೂರು( 198 ಪಾಲಿಕೆ ಸದಸ್ಯರಿದ್ದಾರೆ)


-  .1) ಸ್ಥಳಿಯರ ಆಶೋತ್ತರ ಮತ್ತು ಕಲ್ಯಾಣವನ್ನು ಸಾಧೀಸುವುದಕ್ಕಗಿ ಸ್ಥಾಪಿಸಲಾದ ಸರ್ಕಾರ- ಡಾ|| ಎಸ್.ರಾಧಾಕೃಷ್ಣನ್
-  2) ಭಾರತದ ಸ್ಥಳೀಯ ಸಂಸ್ಥೆಗಳ ಜನಕ - ಲಾರ್ಡ ರಿಪ್ಪನ್
-  3) ಶ್ರೀ ಬಲವಂತರಾಯ ಮೆಹತಾ ಶಿಫಾರಸ್ಸನ್ನು ಮೊದಲಿಗೆ ಜಾರಿಗೆ ತಂದ ರಾಜ್ಯ- ರಾಜಸ್ಥಾನ
-  4) 73 ನೇತಿದ್ದುಪಡಿ ಅನ್ವಯ ಕರ್ನಾಟಕದಲ್ಲಿ ಜಾರಿಗೆ ತರಲಾದ ಅಧಿನಿಯಮ- ಕರ್ನಾಟಕ ಪಂಚಾಯತ್ ರಾಜ್' ಅಧಿನಿಯಮ-1993

 

 ಗದ್ಯಪಾಠ - 1.
ಶಬರಿ   - ಪು. ತಿ. ನರಸಿಂಹಾಚಾರ್ಯ

 ನಿನ್ನೆಳಮೆ ಮೃದುತೆಯನು ಅವನ ಸ್ಪರ್ಶಕೆ ತೆರದೆ | ಬರಿಗಾಳಿಗಾರಿರುವ ನಿನ್ನೆ ಚಂದಳಿರೇ, |
 ತುಂಬಿಬಂಬಲ ಹೊಗಳ್ವೆಗಿಂಬಾದ ಕಂಪಿನಿಂ | ದವನಸುವನುದ್ದೀಪಿಸದೆ ಸೊರಗಿದಲರೇ |
 ಅವನ ಪ್ರಾಣಾಹುತಿಗೆ ಬರದೆ ರುಚಿಹದಕೆಟ್ಟು | ಹುಳುವಿಗಾಸರೆಯಾದ ಎಲೆ ವನ್ಯ ಫಲವೇ |
 ಮೀಸಲಾಗದೆ ಇಂತು ಮಾಸಲಾಗುವ ಇವನು | ಮರಮರಳಿ ಹೊಸತರಿಂದಣಿಗೈವ ಛಲವೇ|
ಪ್ರಶ್ನೆಗಳು :
1. ಶಬರಿಯು ತಳಿರು ಹೂ, ಹಣ್ಣುಗಳು ರಾಮನ ಸೇವೆಗೆ ಮೀಸಲಾಗಲಿಲ್ಲವೆಂದು ಹೇಗೆ ಹೇಳಿದ್ದಾಳೆ?
2. ಶಬರಿಗಿರುವ ಛಲ ಯಾವುದು?

ಉತ್ತರಗಳು :
1. ರಾಮನ ಸ್ಪರ್ಶಕೆ ಬಾರದೆ ಬರಿಯ ಗಾಳಿಗೆ ಸಿಲುಕಿ ಮೃದುತೆಯನು ಕಳೆದುಕೊಂಡ ಚಂದಳಿರೇ, ದುಂಬಿಗಳಿಂದ ಹೊಗಳಿಸಿಕೊಂಡರೂ ರಾಮನ ಉಸಿರನ್ನು ಉದ್ದೀಪಿಸದೆ ಸೊರಗಿದ ಕಂಪು ತುಂಬಿದ ಹೂಗಳೇ, ರಾಮನ ಪ್ರಾಣಾಹುತಿಗೆ ಬಾರದೆ ಹುಳುವಿಗಾಸರೆಯಾಗಿ ರುಚಿಹದಗೆಟ್ಟ ಹಣ್ಣುಗಳೇ ಎಂದು ತಳಿರು ಹೂ ಹಣ್ಣುಗಳನ್ನು ಕುರಿತು ಹೇಳಿದ್ದಾಳೆ.

2. ರಾಮನ ಸೇವೆಗೆ ಮೀಸಲಾಗದೆ ಕೆಟ್ಟುಹೋಗುವ ತಳಿರು, ಹೂ, ಹಣ್ಣುಗಳು ಸದಾ ರಾಮನ ಸೇವೆಗೆ ಮೀಸಲಾಗಿರುವಂತೆ, ಮತ್ತೆ ಮತ್ತೆ ಹೊಸ ಹೊಸ ತಳಿರು ಹೂ ಹಣ್ಣುಗಳಿಂದ ಪ್ರತಿನಿತ್ಯವೂ ಸಿದ್ಧಪಡಿಸುವುದೇ ಶಬರಿಯ ಛಲವಾಗಿದೆ.

ಗದ್ಯಪಾಠ - 2.
ಅಮೆರಿಕದಲ್ಲಿ ಗೊರೂರು.   ಗೊರೂರು ರಾಮಸ್ವಾಮಿ ಅಯ್ಯಂಗಾರ್

ನಾನು ಬಲಗಡೆಯ ಮೊದಲನೆಯ ಮನೆಗೆ ಹೋಗಿ ನೋಡಿದೆ. ಬೀಗ ಹಾಕಿತ್ತು. ಎಡಗಡೆಯ ಎರಡು ಮನೆಗಳಿಗೆ ಹೋದೆ, ಯಾರೂ ಇರಲಿಲ್ಲ. ಬೀದಿಯಲ್ಲಿ ಯಾರಾದರೂ ಇದ್ದಾರೆಯೇ ಎಂದು ನೋಡಿದೆ. ಅಮೆರಿಕದ ಬೀದಿಯಲ್ಲಿ ನಡೆದುಕೊಂಡು ಹೋಗುವವರೇ ವಿರಳ. ಕಾರಿನಲ್ಲಿ 65 ರಿಂದ 70 ಮೈಲು ವೇಗದಲ್ಲಿ ಗರಹೊಡೆದವರಂತೆ ನುಗ್ಗುತ್ತಿರುತ್ತಾರೆ. ಇಷ್ಟೆಲ್ಲ ಗದ್ದಲ ಮಾಡುತ್ತಿದ್ದರೂ ಮನೆಯೊಳಗಿನ ವಿದ್ಯುತ್ ಕೊಂಬು ಲಕ್ಷ್ಯವಿಲ್ಲದೆ ಒಂದೇ ಸಮನಾಗಿ ಕೂಗುತ್ತಲೇ ಇತ್ತು.
 ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರೈಮರಿ ಶಾಲೆ ಇದ್ದಿತು. ಅದಾಗ ಪಾಠಶಾಲೆಯ ಹುಡುಗರನ್ನು ವಿರಾಮಕ್ಕಾಗಿ ಬಿಟ್ಟುದನ್ನು ನೋಡಿ, ನನ್ನ ಹೆಂಡತಿ ಆ ಸ್ಕೂಲಿಗೆ ಹೋಗಿ ಯಾರಾದರೂ ಹುಡಗರನ್ನೋ, ಮೇಷ್ಟ್ರನ್ನೋ ಕರೆದುಕೊಂಡು ಬನ್ನಿ. ಮನೆ ಸುಟ್ಟು ಹೋಗುವುದರೊಳಗಾಗಿ ಬನ್ನಿ! ಎಂದು ಹೇಳಿದಳು. ಅವಳಿಗೂ ನನ್ನ ಮೇಲೆ ಕೋಪ. ಹೆಂಗಸರೂ ಮಕ್ಕಳೂ ವಿದ್ಯುಚ್ಛಕ್ತಿ, ಯಂತ್ರದ ಏಣಿ ಇವನ್ನೆಲ್ಲ ನಡೆಸುವುದನ್ನು ಕಲಿತಿರುವಾಗ, ನಾನು ಯಾಕೆ ಅದನ್ನು ಸ್ವಲ್ಪವೂ ಕಲಿಯಲಿಲ್ಲ ಎಂದು ಅವಳು ನನ್ನನ್ನೇ ಕೋಪದಿಂದ ನೊಡುತ್ತ ನನಗೆ ಇಂಗ್ಲಿಷ್ ಬಂದಿದ್ದರೆ, ನಾನು ಇಷ್ಟು ಹೊತ್ತಿಗೆ ಬೆಂಕಿ ಆರಿಸುವವರನ್ನೇ ಕರೆಸಿಬಿಡುತ್ತಿದ್ದೆ. ಎನ್ನುತ್ತಿರುವಂತೆ ನಾನು ಸ್ಕೂಲಿನತ್ತ ಹೆಜ್ಜೆ ಹಾಕಿದೆ. ಹಾಗೆ ಹೋಗುವಾಗ ಯಾವನಾದರೂ ದೊಡ್ಡ ಹುಡುಗ ಸಿಕ್ಕರೆ ಅವನನ್ನೇ ಮನೆಗೆ ಕರೆದುಕೊಂಡು ಹೋಗೋಣ ಎಂದು ಶಾಲಾ ಆವರಣವನ್ನು ಪ್ರವೇಶಿಸಿ, ಎಲ್ಲರನ್ನೂ ನೋಡುತ್ತಿದ್ದೆ. ನನ್ನನ್ನು ನೋಡಿದ ಕೂಡಲೇ ಅವರೆಲ್ಲ ಅಲ್ಲಿಂದ ಎದ್ದು ನಿಧಾನವಾಗಿ ನನ್ನನ್ನೇ ದುರುದುರನೆ ನೋಡುತ್ತ ಸ್ಕೂಲಿನ ಕಡೆಗೆ ಹೊರಟೇ ಹೋದರು.

ಪ್ರಶ್ನೆಗಳು :
1. ಗೊರೂರರ ಹೆಂಡತಿ ಕೋಪಿಸಿಕೊಂಡು ನಾನು ಇಷ್ಟು ಹೊತ್ತಿಗೆ ಬೆಂಕಿ ಆರಿಸುವವರನ್ನೇ ಕರೆಸಿ ಬಿಡುತ್ತಿದ್ದೆ ಎನ್ನಲು ಕಾರಣವೇನು?
2. ಗೊರೂರರು ವಿದ್ಯುತ್ ಒಲೆಯ ಕೊಂಬಿನ ಶಬ್ದ ನಿಲ್ಲಿಸಲು ಮಾಡಿದ ಪ್ರಯತ್ನಗಳು ಯಾವುವು?

ಉತ್ತರಗಳು :
1. ವಿದ್ಯುತ್ ಒಲೆಯು ಒಂದೇ ಸಮನೆ ಕೂಗುತ್ತಿದ್ದು, ಏನಾಗಿದೆ ಎಂದು ತಿಳಿಯದೆ ನಿಲ್ಲಿಸಲಾಗದ್ದರಿಂದ ಸಹಾಯಕ್ಕಾಗಿ ಗೊರೂರರು ಹುಡುಕುತ್ತಿರುವುದನ್ನು ನೋಡಿದ ಅವರ ಹೆಂಡತಿ ಅಮೆರಿಕದಲ್ಲಿ ಹೆಂಡತಿ, ಮಕ್ಕಳಾದಿಯಾಗಿ ಎಲ್ಲರೂ ವಿದ್ಯುಚ್ಛಕ್ತಿ, ಯಂತ್ರದ ಏಣಿ ಎಲ್ಲವನ್ನೂ ನಡೆಸುತ್ತಿರುವಾಗ ಗೊರೂರರು ಏನನ್ನೂ ಕಲಿತಿಲ್ಲವೆಂದು ಕೋಪದಲ್ಲಿ ಈ ರೀತಿ ಹೇಳಿದರು.

2. ಗೊರೂರರು ವಿದ್ಯುತ್ ಒಲೆಯ ಶಬ್ದ ನಿಲ್ಲಿಸಲು ಸಹಾಯಕ್ಕಾಗಿ ಮನೆಯ ಎಡ ಬಲ ಭಾಗಗಳ ಮನೆಗಳು, ಬೀದಿಯಲ್ಲಿ ಓಡಾಡುವವರು, ಕಾರಿನಲ್ಲಿ ಹೋಗುವವರು ಯಾರಾದರೂ ಸಿಗಬಹುದೇ ಎಂದು ನೋಡಿದರು. ಯಾರೂ ಸಿಗದಿದ್ದಾಗ ಹತ್ತಿರದಲ್ಲೇ ಇದ್ದ ಶಾಲೆಗೆ ಹೋಗಿ ಸಹಾಯ ಕೇಳಿದರು.

 ಗದ್ಯಪಾಠ - 3.
ಜೀವನದೃಷ್ಟಿ                                                       - ವಿ. ಕೃ. ಗೋಕಾಕ್

    ಈ ಮಾತು ಸಾಧಿಸದೆ ಯಾವ ವ್ಯಕ್ತಿತ್ವಕ್ಕೂ ಪೂರ್ಣತೆಯಿಲ್ಲ. ಹೆರವರ ಹಿತ ಚಿಂತನೆ ಮಾಡುವುದು ಸಗುಣಬ್ರಹ್ಮದ ಉಪಾಸನೆಯ ಒಂದು ಭಾಗ. ತನ್ನಂತೆ ಪರರನ್ನು ಬಗೆಯ ಬೇಕಾದ ಕಾರಣ - ತನ್ನಲ್ಲಿಯೂ, ಪರರಲ್ಲಿಯೂ ಒಂದೇ ದೈವಿಕತೆಯು ಗುಪ್ತವಾಗಿ ನೆಲೆಸಿದೆಯೆಂದು, ಇಂಥ ಒಂದು ಸ್ಥೂಲಭಾವನೆಯು ಮನಸ್ಸಿನಲ್ಲಿದ್ದರೂ ಅದನ್ನು ವ್ಯವಹಾರದಲ್ಲಿ ಇಳಿಸುವ ಜಾಣ್ಮೆಯೇ ಒಂದು ಕಲೆ, ಕರ್ಮಕುಶಲತೆ. ಇಂದಿನ ಕಲೋಪಾಸಕನೂ ಅಂತಜರ್ೀವಿಯೂ ಈ ಮಾತನ್ನು ತಿಳಿದು ಅದನ್ನು ಅರಗಿಸಿಕೊಳ್ಳಬೇಕು. ಸಾಮಾಜಿಕ ಪುನರ್ ಘಟನೆಯಲ್ಲಿ ರಷ್ಯದ ಸಮತಾವಾದವೂ ಭಾರತದ ಅಧ್ಯಾತ್ಮವಾದವೂ ರೂಪಗೊಂಡು ಬೆರೆಯಬೇಕಾಗಿದ್ದಂತೆ ಇಂದಿನ ಓರ್ವ ವ್ಯಕ್ತಿಯ ಜೀವನದಲ್ಲಿ ಆಂತರಿಕ ದೃಷ್ಟಿಯ ಹಾಗೂ ಅನ್ಯರ ಹಿತದೃಷ್ಟಿಗಳ ಪ್ರಜ್ಞೆಯ ಸಮ್ಮಿಲನವಾಗಬೇಕಾಗಿದೆ. ರಸವೇ ಜೀವನ. ರಸದ ಸೂಕ್ಷ್ಮತೆ ವಿಶಾಲತೆಗಳ ವ್ಯತ್ಯಯರಹಿತ ವಿಕಾಸವೇ ವ್ಯಕ್ತಿ ಜೀವನ. ಸಮರಸವೇ ಸಹಜೀವನ. ಬರಿ ಸ್ವಾನುಭೂತಿಯಿಂದ ಸಾಗುವ ಜೀವನರಥಕ್ಕೆ ಒಗ್ಗಾಲಿಯ ಭೀತಿಯಿದೆ. ಸಹಾನುಭೂತಿಯು ಅದರ ಜೋಡಣೆಗೆ ಅವಶ್ಯವಾದುದು.

ಪ್ರಶ್ನೆಗಳು :
1. ಪೂರ್ಣ ವ್ಯಕ್ತಿತ್ತ್ವಕ್ಕಾಗಿ ಅಂತಜರ್ೀವಿಯು ಅರಗಿಸಿಕೊಳ್ಳಬೇಕಾದ ಅಂಶಗಳಾವುವು?
2. ರಸವೇ ಜೀವನ; ಸಮರಸವೇ ಸಹಜೀವನವಾಗಲು ಅವಶ್ಯವಾದ ಅಂಶಗಳುಯಾವುವು?

ಉತ್ತರಗಳು :
1. ಹೆರವರ ಹಿತಚಿಂತನೆ ಮಾಡುವುದು. ತನ್ನಂತೆ ಪರರನ್ನು ಬಗೆಯುವುದು. ತನ್ನಲ್ಲಿಯೂ ಪರರಲ್ಲಿಯೂ ಒಂದೇ ದೈವಿಕತೆಯು ಗುಪ್ತವಾಗಿ ನೆಲೆಸಿದೆಯೆಂದು,  ಇಂಥ ಒಂದು ಸ್ಥೂಲಭಾವನೆಯು ಮನಸ್ಸಿನಲ್ಲಿದ್ದರೂ ಅದನ್ನು ವ್ಯವಹಾರದಲ್ಲಿ ಇಳಿಸುವ, ಬಳಸುವ ಕರ್ಮಕುಶಲತೆಯನ್ನು ಅರಿತಿರಬೇಕು.

2. ವ್ಯಕ್ತಿಯ ಜೀವನದಲ್ಲಿ ಸಮತಾವಾದ ಮತ್ತು ಅಧ್ಯಾತ್ಮವಾದಗಳೆರಡೂ ಬೆರೆತು, ಆಂತರಿಕದೃಷ್ಟಿ ಹಾಗೂ ಅನ್ಯರ ಹಿತದೃಷ್ಟಿಗಳ ಪ್ರಜ್ಞೆಯ ಸಮ್ಮಿಲನವಾಗಬೇಕಾಗಿದೆ. ರಸದ ಸೂಕ್ಷ್ಮತೆ ವಿಶಾಲತೆಗಳ ವ್ಯತ್ಯಾಸರಹಿತ ವಿಕಾಸ, ಸ್ವಾನುಭೂತಿ ಮತ್ತು ಸಹಾನುಭೂತಿಗಳ ಜೋಡಣೆ ಸಮರಸ ಜೀವನಕ್ಕೆ ಅವಶ್ಯವಾದ ಅಂಶಗಳಾಗಿವೆ.

ಗದ್ಯಪಾಠ - 5
ಭಾಗ್ಯಶಿಲ್ಪಿ.  ಸರ್. ಎಂ. ವಿಶ್ವೇಶ್ವರಯ್ಯ                          - ಡಾ. ಡಿ. ಎಸ್. ಜಯಪ್ಪಗೌಡ

    ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ ಹಾಕಿದರು. ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಟೇ ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು. ರಾಜ್ಯ ಪ್ರವಾಸ ಮಾಡಿ ಅಜಮಾಯಿಸಿ ಕಾರ್ಯ ನಡೆಸಿದರು. ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ತ್ಯ ನೀಡಿದರು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು. 'ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ' ಎಂದು ಜನರು ಹಾಡಿ ಹೊಗಳಿದರು. ಗಾಂಧೀಜಿ ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದರು. ಇದರಿಂದ `ಮೈಸೂರು ಮಾದರಿ' ಎಂಬ ಹೊಸ ಆಡಳಿತ ಮಾದರಿ ಜನ್ಮತಾಳಿತು.

ಪ್ರಶ್ನೆಗಳು :
1. `ಮೈಸೂರು ಮಾದರಿ' ಎಂದು ಪ್ರಸಿದ್ಧವಾಗಲು ಆಡಳಿತದಲ್ಲಿ ತಂದ ಸುಧಾರಣೆಗಳಾವುವು?
2. `ಮೈಸೂರು ಮಾದರಿ' ಆಡಳಿತ ಯಾರು ದಿವಾನರಾಗಿದ್ದಾಗ ಜನ್ಮ ತಾಳಿತು? ಮತ್ತು ಜನರು ಅವರನ್ನು ಏನೆಂದು ಹೊಗಳಿದರು?

ಉತ್ತರಗಳು :
1. ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ, ಆಡಳಿತದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು, ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ  ನ್ಯಾಯಾಂಗ ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದುದು, ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆ, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ - ಇವು ಮೈಸೂರು ಮಾದರಿ ಎಂದು ಪ್ರಸಿದ್ಧವಾಗಲು ಆಡಳಿತದಲ್ಲಿ ಮಾಡಿದ ಸುಧಾರಣೆಗಳು.
2. `ಮೈಸೂರು ಮಾದರಿ ಆಡಳಿತ' ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದಾಗ ಜನ್ಮತಾಳಿತು. ಜನರು ಅವರನ್ನು 'ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ' ಎಂದು ಹಾಡಿ ಹೊಗಳಿದರು.

Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment