How to Download Files in Inyatrust :
Step By Step with Image | Watch Video
ಘಟಕದ ಹೆಸರು: 2. ಪೌರ ಮತ್ತು ಪೌರತ್ವ ( ರಾಜ್ಯಶಾಸ್ತ್ರ)
ಜ್ಞಾನ ರಚನಾ ಅಂಶಗಳು: 1. ಪೌರತ್ವ ದ ಅರ್ಥ , ವ್ಯತ್ಯಾಸ, ಸೌಲಭ್ಯಗಳು
2. ಪೌರ ಮತ್ತು ವಿದೇಶಿಯರ ನಡುವಿನ ವ್ಯತ್ಯಾಸಗಳು,
3. ಪೌರತ್ವ ಪಡೆಯುವ ಮತ್ತು ಕಳೆದು ಕೊಳ್ಳುವ ವಿಧಾನಗಳು
ಕಲಿವಿನ ವಿಧಾನ: ಚಚರ್ಾ ವಿಧಾನ, ಪ್ರಶ್ನೋತ್ತರ ವಿಧಾನ
ಅನುಕೂಲಕಾರರು : ಪೌರ ಮತ್ತು ಪೌರತ್ವಕ್ಕೆ ಹಾಗು ಪೌರನಿಗೆ ನೀಡಿರುವ ಸೌಲಭ್ಯಗಳ ಕುರಿತು ಗುಂಪುರಚನೆ ಮಾಡಿ ಚರ್ಚೆಗೆ ಹಚ್ಚುವುದು. ಪೌರ ಮತ್ತು ವಿದೇಶಿಯರ ಕುರಿತು ಪ್ರಶ್ನೋತ್ತರಗಳನ್ನು ಕೇಳಿ ವಿಷಯ ಮನವರಿಕೆ ಮಾಡಿಕೊಳ್ಳಲು ಅನುಕೂಲಿಸುವುದು.
ವಿದ್ಯಾರ್ಥಿಗಳು : ಗುಂಪಿನಲ್ಲಿ ಚರ್ಚಿಸಿ ಸಕ್ರಿಯವಾಗಿ ಭಾಗವಹಿಸುವರು. ಕಲಿಕೆಗೆ ಪೂರಕವಾದ ಪ್ರಶ್ನೆಗಳನ್ನು ಕೇಳುವರು ಮತ್ತು ಉತ್ತರಗಳನ್ನು ಪಡೆಯುವರು.
ಚಟುವಟಿಕೆಗಳು: ಪೌರರ ಸೌಲಭ್ಯಗಳನ್ನು ಪಟ್ಟಿ ಮಾಡುವರು. ಪೌರ ಮತ್ತು ವಿದೇಶಿಯರ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡುವರು. ಪ್ವರತ್ವನ್ನು ಪಡೆಯುವ ಮತ್ತು ಕಳೆದುಕೊಳ್ಳುವ ವಿಧಾನಗಳನ್ನು ಚಾಟ್ಸರ್ ನಲ್ಲಿ ಬರೆದು ಪ್ರದರ್ಶಿಸುವರು. ಪೌರನು ಮಾಡಬೇಕಾದ ಕರ್ತವ್ಯಗಳನ್ನು ಚರ್ಚಿಸಿ ಪಟ್ಟಿ ಮಾಡುವರು.
ಮೌಲ್ಯಮಾಪನ: ರಾಷ್ಟ್ರದಿಂದ ಸಕಲ ಸೌಲಭ್ಯಗಳನ್ನು ಅನುಭವಿಸುವ ಪೌರನು ರಾಷ್ಟ್ರಕ್ಕಾಗಿ ಮಾಡಬೇಕಾದ ಜವಾಬ್ದಾರಿಯುತ ಕೆಲಸವನ್ನು ಸೂಚಿಸುವಂತೆ ಒಂದು ಪ್ರಬಂಧ ಬರೆರಿ.
ಕಲಿಕಾ ಸಾಮಾಗ್ರಿಗಳು: ಮಿಂಚು ಪಟ್ಟಿಗಳು, ಪೌರತ್ವ ಪಡೆಯುವ ಚಾರ್ಟ್, ಪೌರತ್ವ ಕಳೆದುಕೊಳ್ಳವ ಚಾರ್ಟ್,, ಪೌರ ಮತ್ತು ವಿದೇಶಿಯರ ವ್ಯತ್ಯಾಸಗಳ ಪಟ್ಟಿಯ ಚಾಟ್ರ್ ಆಕರ ಗ್ರಂಥಗಳು ಮನನ ಮಾಡಿಕೊಂಡ ಅಂಶ ಪೌರ ಮತ್ತು ಸರ್ಕಾರದ ನಡುವಿನ ಸೌಹಾರ್ದ ಸಂಬಂಧ.
ಅನುಕೂಲಕಾರರ ಸಹಿ: ಮುಖ್ಯೋಪಾಧ್ಯಾಯರ ಸಹಿ
8.7 :ಕಲಾ ಶಿಕ್ಷಣ ಮತ್ತು ಕಾರ್ಯಾನುಭವ ಚಟುವಟಿಕೆಗಳ ಮೌಲ್ಯಮಾಪನವನ್ನು ಈ ವಿಧಾನಗಳಿಂದ ಮಾಡುವುದು.
1. ನೇರವೀಕ್ಷಣೆ
2. ಮೌಖಿಕ ಪರೀಕ್ಷೆ
3. ಉತ್ಪಾದನಾ ವಿಧಾನ ಮತ್ತು ಪ್ರಾಯೋಗಿಕ ಮೌಲ್ಯೀಕರಣ
4. ಲಿಖಿತ ಪರೀಕ್ಷೆ
ನೇರ ವೀಕ್ಷಣ : ವಿದ್ಯಾರ್ಥಿಯ ವರ್ತನೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ತರಗತಿಯಲ್ಲಿನ ಆಸಕ್ತಿ, ಶ್ರದ್ಧೆ, ಸಮಯನಿಷ್ಠೆ, ಸಹಕಾರ, ಪ್ರಾಮಾಣಿಕತೆ, ಮುಂದಾಳುತನ, ಆತ್ಮವಿಶ್ವಾಸ, ಪರಿಪೂರ್ಣತೆ ಇತ್ಯಾದಿ ಗುಣಗಳನ್ನು ಮೌಲ್ಯಮಾಪನ ಮಾಡಬಹುದು.
ಇಲ್ಲಿ ಮತ್ತು ಅ ಶ್ರೇಣಿಗಳನ್ನು ಅವರ ಚಟುವಟಿಕೆ ಆಧರಿಸಿ ನೀಡಬೇಕು.
*ಇಲ್ಲಿಯೂ ಸಹ ಮೌಖಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳು ಇದ್ದು ಮೇಲ್ಕಂಡ ರೀತಿಯಲ್ಲಿ ಗ್ರೇಡ್ ನೀಡುವುದು.
*ಕಲಾ ಶಿಕ್ಷಣದ ಮೌಲ್ಯಮಾಪನವು ಪ್ರಾಯೋಗಿಕ ಪರೀಕ್ಷೆಗಳಿಗೆ ಶೇ 80 ರಷ್ಟು ಅಂಶಗಳನ್ನು ಮತ್ತು ಲಿಖಿತ ಪರೀಕ್ಷೆಗಳಿಗೆ ಶೇ 20ರಷ್ಟು ಅಂಶಗಳನ್ನು ಹೊಂದಿರುತ್ತದೆ. ಪ್ರಾಯೋಗಿಕ ಪರೀಕ್ಷೆಗಳು ರೂಪಣಾತ್ಮಕ ಮೌಲ್ಯಮಾಪನದ ಭಾಗವಾಗಿರುತ್ತವೆ.
*ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಪ್ರಕ್ರಿಯೆಯ ಹೆಚ್ಚಿನ ಮಾಹಿತಿಗಾಗಿ ಕಲಾ ಶಿಕ್ಷಣ ಮೌಲ್ಯಮಾಪನದ ಅಂಶಗಳನ್ನು ಅವಲೋಕನ ಮಾಡುವುದು.
*ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರು ಓಅಈ-2005 ಆಧಾರಿತ ಪಠ್ಯವಸ್ತು ವನ್ನು ಅನುಸರಿಸಿ ಪ್ರಾಯೋಗಿಕ ಚಟುವಟಿಕೆ ಮತ್ತು ತಾತ್ವಿಕ ಪರೀಕ್ಷೆಗಳನ್ನು ನಡೆಸಿ ಅಂಕಗಳನ್ನು ಕ್ರೋಢೀಕರಿಸಿ ಅಂಕಪಟ್ಟಿಯಲ್ಲಿ ಗ್ರೇಡನ್ನು ನಮೂದಿಸುವುದು.
8.7: . ಸಂಗೀತ
ಸಂಗೀತ ವಿಷಯದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಲಲಿತ ಕಲೆಗಳು ನಮ್ಮೆಲ್ಲ ಇಂದ್ರಿಗಳು ಮೇಳೈಸಿ, ಮನಕ್ಕೆ ಮುದ ನೀಡುತ್ತವೆ. ಆಂತರಿಕವಾಗಿ ಮಗುವನ್ನು ಆನಂದಗೊಳಿಸಿ ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಕ್ರಿಯಾತ್ಮಕವಾಗಿ, ಕೌಶಲಪೂರಿತವಾಗಿ ರೂಪಿಸುವಲ್ಲಿ ಇವು ಸಹಕಾರಿಯಾಗುತ್ತವೆ. ವಾಸ್ತವ ಜಗತ್ತಿನ ಜಂಜಾಟಗಳನ್ನು ದೂರಮಾಡಿ, ಹಿರಿಕಿರಿಯರೆನ್ನದೆ, ಮಧುರಾನುಭವ ನೀಡುವ ಲಲಿತ ಕಲೆಗಳು ಮಗುವಿನ ಪ್ರತಿಭೆಯನ್ನು ಹೊರಗೆಡುವ ದೃಷ್ಟಿಯಿಂದ ಕಲಿಸಬೇಕಾದುದು ಅತ್ಯಾವಶ್ಯಕ. ಅದಕ್ಕಾಗಿಯೇ
ಶಾಲೆಗಳಲ್ಲಿ ಸಂಗೀತ, ನೃತ್ಯ ಮತ್ತು ರಂಗಕಲೆಗಳನ್ನು ಮಕ್ಕಳಿಗೆ ಕಲಿಸಲು ನಿರ್ಧರಿಸಲಾಗಿದೆ. ಈ ವಿಷಯದಲ್ಲಿ ಮೌಲ್ಯಮಾಪನಕ್ಕೆ ಅದರದ್ದೇ ವೈಶಿಷ್ಟ್ಯವಿದೆ.
*ಮೌಲ್ಯಮಾಪನವು ಕಲಿಕೆಯನ್ನು ದೃಢೀಕರಿಸುವ ಚಟುವಟಿಕೆಯಾಗಿರಬೇಕೇ ಹೊರತು ಮೌಲ್ಯಮಾಪನಕ್ಕಾಗಿ ಕಲಿಕೆಯಾಗಬಾರದು.
* ಪರೀಕ್ಷೆಯನ್ನು ನಡೆಸಿ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಶ್ರೇಣಿಗಳಿಗೆ ಪರಿವರ್ತಿಸಿ ಪ್ರಗತಿ ಪತ್ರದಲ್ಲಿ ಶ್ರೇಣಿಗಳನ್ನು ಮಾತ್ರ ನಮೂದಿಸಬೇಕು. ಅಂಕಗಳನ್ನು ಶಿಕ್ಷಕರು ತಮ್ಮ ವೈಯಕ್ತಿಕ ಅಂಕವಹಿಯಲ್ಲಿ ನಮೂದಿಸಿಕೊಳ್ಳುವುದು.
*ಪ್ರಾಯೋಗಿಕ ಪರೀಕ್ಷೆಗೆ ತರಗತಿಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಲುವುದು.
*ಶಾಸ್ತ್ರಭಾಗದ ಪರೀಕ್ಷೆಗೆ ಒಂದು ಅವಧಿ(40-45 ನಿಮಿಷ)ಯನ್ನು ಉಪಯೋಗಿಸಿಕೊಳ್ಳುವುದು.
*ಪ್ರಾಯೋಗಿಕ ಮತ್ತು ಶಾಸ್ತ್ರ ಭಾಗದ ಪಠ್ಯಕ್ರಮದಲ್ಲಿ ಬರಬಹುದಾದಂತಹ ಎಲ್ಲಾ ಅಂಶಗಳನ್ನು ಒಳಗೊಂಡಂತೆ
ಪ್ರಶ್ನೆಪತ್ರಿಕೆ ಸಿದ್ಧಪಡಿಸಿಕೊಳ್ಳುವುದು.
ಗದ್ಯವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುವುದು.
ಗದ್ಯಭಾಗ
ಗದ್ಯಪಾಠ - 1.
ಶಬರಿ
- ಪು. ತಿ. ನರಸಿಂಹಾಚಾರ್ಯ
ನಿನ್ನೆಳಮೆ ಮೃದುತೆಯನು ಅವನ ಸ್ಪರ್ಶಕೆ ತೆರದೆ | ಬರಿಗಾಳಿಗಾರಿರುವ ನಿನ್ನೆ ಚಂದಳಿರೇ, |
ತುಂಬಿಬಂಬಲ ಹೊಗಳ್ವೆಗಿಂಬಾದ ಕಂಪಿನಿಂ | ದವನಸುವನುದ್ದೀಪಿಸದೆ ಸೊರಗಿದಲರೇ |
ಅವನ ಪ್ರಾಣಾಹುತಿಗೆ ಬರದೆ ರುಚಿಹದಕೆಟ್ಟು | ಹುಳುವಿಗಾಸರೆಯಾದ ಎಲೆ ವನ್ಯ ಫಲವೇ |
ಮೀಸಲಾಗದೆ ಇಂತು ಮಾಸಲಾಗುವ ಇವನು | ಮರಮರಳಿ ಹೊಸತರಿಂದಣಿಗೈವ ಛಲವೇ|
ಪ್ರಶ್ನೆಗಳು :
1. ಶಬರಿಯು ತಳಿರು ಹೂ, ಹಣ್ಣುಗಳು ರಾಮನ ಸೇವೆಗೆ ಮೀಸಲಾಗಲಿಲ್ಲವೆಂದು ಹೇಗೆ ಹೇಳಿದ್ದಾಳೆ?
2. ಶಬರಿಗಿರುವ ಛಲ ಯಾವುದು?
ಉತ್ತರಗಳು :
1. ರಾಮನ ಸ್ಪರ್ಶಕೆ ಬಾರದೆ ಬರಿಯ ಗಾಳಿಗೆ ಸಿಲುಕಿ ಮೃದುತೆಯನು ಕಳೆದುಕೊಂಡ ಚಂದಳಿರೇ, ದುಂಬಿಗಳಿಂದ ಹೊಗಳಿಸಿಕೊಂಡರೂ ರಾಮನ ಉಸಿರನ್ನು ಉದ್ದೀಪಿಸದೆ ಸೊರಗಿದ ಕಂಪು ತುಂಬಿದ ಹೂಗಳೇ, ರಾಮನ ಪ್ರಾಣಾಹುತಿಗೆ ಬಾರದೆ ಹುಳುವಿಗಾಸರೆಯಾಗಿ ರುಚಿಹದಗೆಟ್ಟ ಹಣ್ಣುಗಳೇ ಎಂದು ತಳಿರು ಹೂ ಹಣ್ಣುಗಳನ್ನು ಕುರಿತು ಹೇಳಿದ್ದಾಳೆ.
2. ರಾಮನ ಸೇವೆಗೆ ಮೀಸಲಾಗದೆ ಕೆಟ್ಟುಹೋಗುವ ತಳಿರು, ಹೂ, ಹಣ್ಣುಗಳು ಸದಾ ರಾಮನ ಸೇವೆಗೆ ಮೀಸಲಾಗಿರುವಂತೆ, ಮತ್ತೆ ಮತ್ತೆ ಹೊಸ ಹೊಸ ತಳಿರು ಹೂ ಹಣ್ಣುಗಳಿಂದ ಪ್ರತಿನಿತ್ಯವೂ ಸಿದ್ಧಪಡಿಸುವುದೇ ಶಬರಿಯ ಛಲವಾಗಿದೆ
ಗದ್ಯಪಾಠ - 2.
ಅಮೆರಿಕದಲ್ಲಿ ಗೊರೂರು. ಗೊರೂರು ರಾಮಸ್ವಾಮಿ ಅಯ್ಯಂಗಾರ್
ನಾನು ಬಲಗಡೆಯ ಮೊದಲನೆಯ ಮನೆಗೆ ಹೋಗಿ ನೋಡಿದೆ. ಬೀಗ ಹಾಕಿತ್ತು. ಎಡಗಡೆಯ ಎರಡು ಮನೆಗಳಿಗೆ ಹೋದೆ, ಯಾರೂ ಇರಲಿಲ್ಲ. ಬೀದಿಯಲ್ಲಿ ಯಾರಾದರೂ ಇದ್ದಾರೆಯೇ ಎಂದು ನೋಡಿದೆ. ಅಮೆರಿಕದ ಬೀದಿಯಲ್ಲಿ ನಡೆದುಕೊಂಡು ಹೋಗುವವರೇ ವಿರಳ. ಕಾರಿನಲ್ಲಿ 65 ರಿಂದ 70 ಮೈಲು ವೇಗದಲ್ಲಿ ಗರಹೊಡೆದವರಂತೆ ನುಗ್ಗುತ್ತಿರುತ್ತಾರೆ. ಇಷ್ಟೆಲ್ಲ ಗದ್ದಲ ಮಾಡುತ್ತಿದ್ದರೂ ಮನೆಯೊಳಗಿನ ವಿದ್ಯುತ್ ಕೊಂಬು ಲಕ್ಷ್ಯವಿಲ್ಲದೆ ಒಂದೇ ಸಮನಾಗಿ ಕೂಗುತ್ತಲೇ ಇತ್ತು.
ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರೈಮರಿ ಶಾಲೆ ಇದ್ದಿತು. ಅದಾಗ ಪಾಠಶಾಲೆಯ ಹುಡುಗರನ್ನು ವಿರಾಮಕ್ಕಾಗಿ ಬಿಟ್ಟುದನ್ನು ನೋಡಿ, ನನ್ನ ಹೆಂಡತಿ ಆ ಸ್ಕೂಲಿಗೆ ಹೋಗಿ ಯಾರಾದರೂ ಹುಡಗರನ್ನೋ, ಮೇಷ್ಟ್ರನ್ನೋ ಕರೆದುಕೊಂಡು ಬನ್ನಿ. ಮನೆ ಸುಟ್ಟು ಹೋಗುವುದರೊಳಗಾಗಿ ಬನ್ನಿ! ಎಂದು ಹೇಳಿದಳು. ಅವಳಿಗೂ ನನ್ನ ಮೇಲೆ ಕೋಪ. ಹೆಂಗಸರೂ ಮಕ್ಕಳೂ ವಿದ್ಯುಚ್ಛಕ್ತಿ, ಯಂತ್ರದ ಏಣಿ ಇವನ್ನೆಲ್ಲ ನಡೆಸುವುದನ್ನು ಕಲಿತಿರುವಾಗ, ನಾನು ಯಾಕೆ ಅದನ್ನು ಸ್ವಲ್ಪವೂ ಕಲಿಯಲಿಲ್ಲ ಎಂದು ಅವಳು ನನ್ನನ್ನೇ ಕೋಪದಿಂದ ನೊಡುತ್ತ ನನಗೆ ಇಂಗ್ಲಿಷ್ ಬಂದಿದ್ದರೆ, ನಾನು ಇಷ್ಟು ಹೊತ್ತಿಗೆ ಬೆಂಕಿ ಆರಿಸುವವರನ್ನೇ ಕರೆಸಿಬಿಡುತ್ತಿದ್ದೆ. ಎನ್ನುತ್ತಿರುವಂತೆ ನಾನು ಸ್ಕೂಲಿನತ್ತ ಹೆಜ್ಜೆ ಹಾಕಿದೆ. ಹಾಗೆ ಹೋಗುವಾಗ ಯಾವನಾದರೂ ದೊಡ್ಡ ಹುಡುಗ ಸಿಕ್ಕರೆ ಅವನನ್ನೇ ಮನೆಗೆ ಕರೆದುಕೊಂಡು ಹೋಗೋಣ ಎಂದು ಶಾಲಾ ಆವರಣವನ್ನು ಪ್ರವೇಶಿಸಿ, ಎಲ್ಲರನ್ನೂ ನೋಡುತ್ತಿದ್ದೆ. ನನ್ನನ್ನು ನೋಡಿದ ಕೂಡಲೇ ಅವರೆಲ್ಲ ಅಲ್ಲಿಂದ ಎದ್ದು ನಿಧಾನವಾಗಿ ನನ್ನನ್ನೇ ದುರುದುರನೆ ನೋಡುತ್ತ ಸ್ಕೂಲಿನ ಕಡೆಗೆ ಹೊರಟೇ ಹೋದರು.
ಪ್ರಶ್ನೆಗಳು :
1. ಗೊರೂರರ ಹೆಂಡತಿ ಕೋಪಿಸಿಕೊಂಡು ನಾನು ಇಷ್ಟು ಹೊತ್ತಿಗೆ ಬೆಂಕಿ ಆರಿಸುವವರನ್ನೇ ಕರೆಸಿ ಬಿಡುತ್ತಿದ್ದೆ ಎನ್ನಲು ಕಾರಣವೇನು?
2. ಗೊರೂರರು ವಿದ್ಯುತ್ ಒಲೆಯ ಕೊಂಬಿನ ಶಬ್ದ ನಿಲ್ಲಿಸಲು ಮಾಡಿದ ಪ್ರಯತ್ನಗಳು ಯಾವುವು?
ಉತ್ತರಗಳು :
1. ವಿದ್ಯುತ್ ಒಲೆಯು ಒಂದೇ ಸಮನೆ ಕೂಗುತ್ತಿದ್ದು, ಏನಾಗಿದೆ ಎಂದು ತಿಳಿಯದೆ ನಿಲ್ಲಿಸಲಾಗದ್ದರಿಂದ ಸಹಾಯಕ್ಕಾಗಿ ಗೊರೂರರು ಹುಡುಕುತ್ತಿರುವುದನ್ನು ನೋಡಿದ ಅವರ ಹೆಂಡತಿ ಅಮೆರಿಕದಲ್ಲಿ ಹೆಂಡತಿ, ಮಕ್ಕಳಾದಿಯಾಗಿ ಎಲ್ಲರೂ ವಿದ್ಯುಚ್ಛಕ್ತಿ, ಯಂತ್ರದ ಏಣಿ ಎಲ್ಲವನ್ನೂ ನಡೆಸುತ್ತಿರುವಾಗ ಗೊರೂರರು ಏನನ್ನೂ ಕಲಿತಿಲ್ಲವೆಂದು ಕೋಪದಲ್ಲಿ ಈ ರೀತಿ ಹೇಳಿದರು.
2. ಗೊರೂರರು ವಿದ್ಯುತ್ ಒಲೆಯ ಶಬ್ದ ನಿಲ್ಲಿಸಲು ಸಹಾಯಕ್ಕಾಗಿ ಮನೆಯ ಎಡ ಬಲ ಭಾಗಗಳ ಮನೆಗಳು, ಬೀದಿಯಲ್ಲಿ ಓಡಾಡುವವರು, ಕಾರಿನಲ್ಲಿ ಹೋಗುವವರು ಯಾರಾದರೂ ಸಿಗಬಹುದೇ ಎಂದು ನೋಡಿದರು. ಯಾರೂ ಸಿಗದಿದ್ದಾಗ ಹತ್ತಿರದಲ್ಲೇ ಇದ್ದ ಶಾಲೆಗೆ ಹೋಗಿ ಸಹಾಯ ಕೇಳಿದರು.
Comments :
Post a Comment