-->

Encrypting your link and protect the link from viruses, malware, thief, etc! Made your link safe to visit.

ಸಿ.ಸಿ.ಇ ಅನುಷ್ಠಾನ ಪ್ರಕ್ರಿಯೆ

 



ಅಧ್ಯಾಯ 2
ಸಿ.ಸಿ.ಇ ಅನುಷ್ಠಾನ ಪ್ರಕ್ರಿಯೆ (ಮಾರ್ಪಾಡುಗಳು ಸೇರಿದಂತೆ)


2.1: ಒಂದರಿಂದ ರಿಂದ ನಾಲ್ಕನೇ ತರಗತಿಯವರೆಗೆ ನಲಿ-ಕಲಿ ಶಾಲೆಗಳು ಮತ್ತು ನಲಿ-ಕಲಿಯೇತರ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ:
   ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಮೂರನೆಯ ತರಗತಿಯವರೆಗೆ ನಲಿ-ಕಲಿ ಪದ್ಧತಿಯಲ್ಲಿ  ನಿರಂತರ  ಮತ್ತು  ವ್ಯಾಪಕ  ಮೌಲ್ಯಮಾಪನ  ಮಾಡುವ  ಕ್ರಮ  ಈಗಾಗಲೇ ಸಮ್ಮಿಳಿತವಾಗಿದೆ. ಆದ್ದರಿಂದ ಅದನ್ನೇ ಮುಂದುವರೆಸಿಕೊಂಡು ಹೋಗುವುದು.
  ನಲಿ-ಕಲಿಯೇತರ ಇತರ ಎಲ್ಲ ಶಾಲೆಯವರು ಈ ಸಾಹಿತ್ಯದಲ್ಲಿ ನೀಡಿರುವ ನಾಲ್ಕನೆಯ ತರಗತಿಯ ಕ್ರಮಗಳಂತೆಯೇ  ನಿರಂತರ  ಹಾಗೂ  ವ್ಯಾಪಕ  ಮೌಲ್ಯಮಾಪನವನ್ನು  1  ರಿಂದ  3ನೇ  ತರಗತಿಯವರೆಗೂ ಅಳವಡಿಸಿಕೊಳ್ಳಬೇಕಾಗಿರುತ್ತದೆ. ಎಂದರೆ ರೂಪಣಾತ್ಮಕ ಮೌಲ್ಯಮಾಪನಕ್ಕೆ ಶೇ. 60 ರಷ್ಟು ಮತ್ತು ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಶೇ. 40 ರಷ್ಟು ಮೌಲ್ಯವನ್ನು ನೀಡಿ ಮಗುವನ್ನು ಅರ್ಥೈಸಿಕೊಳ್ಳಲು ಶ್ರಮಿಸುವುದು.


ಮೌಲ್ಯಮಾಪನವನ್ನು  ಎನ್.ಸಿ.ಎಫ್  -   2005  ಮತ್ತು  ಆರ್.ಟಿ.ಐ  2009ರ  ಆಶಯಗಳನ್ವಯ  ಪಠ್ಯ (ಸ್ಕೊಲ್ಯಾಸ್ಟಿಕ್) ವಿಷಯಗಳಲ್ಲಿ ಸಂಕಲನಾತ್ಮಕ ಮೌಲ್ಯಮಾಪನವನ್ನು 1 ರಿಂದ 4ನೇ ತರಗತಿಯವರೆಗೆ 20 ಅಂಕಗಳಿಗೆ (15 ಲಿಖಿತ 5 ಮೌಖಿಕ) ಪ್ರತಿ ವಿಷಯದಲ್ಲಿ ಹಮ್ಮಿಕೊಂಡು, ಮಕ್ಕಳ ಪ್ರಗತಿಯನ್ನು ಪಠ್ಯ ವಿಷಯ, ಸಾಮಾಜಿಕ-ವೈಯಕ್ತಿಕ ಕೌಶಲಗಳ ಆಯಾಮಗಳಲ್ಲಿ ಗುರುತಿಸಬೇಕು. ಪ್ರಗತಿಯನ್ನು ಶೇಕಡವಾರು ಈ ಕೆಳಗೆ ನೀಡಿದ ಪ್ರಮಾಣಕ್ಕೆ ಪರಿವರ್ತಿಸಿಕೊಂಡು ಗ್ರೇಡ್ ನೀಡಬೇಕು. ವಾರ್ಷಿಕವಾಗಿ ಕನಿಷ್ಠ ನಾಲ್ಕು ಬಾರಿ ಮಕ್ಕಳ ಎಲ್ಲಾ ಕ್ಷೇತ್ರದ ಸಮಗ್ರ
ಪ್ರಗತಿಯನ್ನು ಪೋಷಕರ ಗಮನಕ್ಕೆ ತರುವುದು.
 
2.3 ಸಂಕಲನಾತ್ಮಕ ಮೌಲ್ಯಮಾಪನ ಹಮ್ಮಿಕೊಳ್ಳಲು ಸಲಹೆಗಳು
ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಅನುದಾನಿತ, ಅನುದಾನರಹಿತ ಶಾಲೆಗಳು ಮತ್ತು ನಾಲ್ಕನೇ ತರಗತಿಯ ಸರ್ಕಾರೀ ಶಾಲೆಗಳಲ್ಲಿ ಸಂಕಲನಾತ್ಮಕ ಮೌಲ್ಯಮಾಪನ ಹಮ್ಮಿಕೊಳ್ಳಲು ಕೆಲವು ಸಲಹೆಗಳು ಹೀಗಿವೆ:

2.4 ಮೌಖಿಕ ಮೌಲ್ಯಮಾಪನ ಹಮ್ಮಿಕೊಳ್ಳಲು ಸಲಹೆಗಳು:
ವಸ್ತು, ವಿಚಾರ, ವ್ಯಕ್ತ್ತಿ, ಪರಿಸರಗಳನ್ನು ಬಳಸಿಕೊಂಡು ನಿರರ್ಗಳ ಅಭಿವ್ಯಕ್ತಿಗೆ ಅನುವಾಗುವಂತೆ ಆಯಾ ಮೌಖಿಕ ಸಾಮಥ್ರ್ಯಗಳಿಗೆ ತಕ್ಕಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.
- ಅನೌಪಚಾರಿಕ/ಔಪಚಾರಿಕ ಸಂಭಾಷಣೆಗಳನ್ನು ಹಮ್ಮಿಕೊಳ್ಳಬಹುದು.
- ಅಗತ್ಯವಿದ್ದರೆ ಅರ್ಥೈಸಿಕೊಂಡ ಕಂಠಪಾಠಗಳನ್ನು ಕೇಳಬಹುದು
- ಪಠ್ಯದ್ದು/ಪಠ್ಯವಲ್ಲದ್ದು ವಾಕ್ಯವೃಂದಗಳು, ಪದಗಳು ಇತ್ಯಾದಿಗಳ ಬಳಕೆ ಮಾಡಿಸಬಹುದು
- ಹೊರಾಂಗಣ/ಒಳಾಂಗಣ ಸನ್ನಿವೇಶಗಳಲ್ಲಿ ತೊಡಗಿಸಿ ಮಾತುಕತೆ ಗಮನಿಸಬಹುದು.
- ಸಾಂದರ್ಭಿಕ/ಸಾಂದರ್ಭಿಕವಲ್ಲದ ಚರ್ಚೆಳನ್ನು ಅವಲೋಕಿಸಬಹುದು
- ತೊಡಗಿಸಿಕೊಂಡ ಯಾವುದೇ ಚಟುವಟಿಕೆಯಲ್ಲಿನ ವರದಿಗಳ ಅಭಿವ್ಯಕ್ತಿಯನ್ನು ಗಮನಿಸಬಹುದು
- ಪುಸ್ತಕಗಳನ್ನು ಬಳಸಿ ಮೌಖಿಕ ಮೌಲ್ಯಮಾಪನ ನಡೆಸುವುದು.
- ಸೂಚನಾ ಸರಣಿಗಳನ್ನು ಆಧರಿಸಿದ ಚಟುವಟಿಕೆ ಮಾಡಿಸಬಹುದು (ಆಟಗಳು, ಓರಿಗಾಮಿ, ಚಿತ್ರಕಲೆ ಎಸ್.ಯು.ಪಿ.ಡಬ್ಲ್ಯೂ ಇತ್ಯಾದಿ).

 ಸೂಚನೆ: ಮೌಖಿಕ ಚಟುವಟಿಕೆಗಳಲ್ಲಿ ಮಕ್ಕಳ ಅನುಭವಗಳಿಗೆ ಹೆಚ್ಚಿನ ಆಧ್ಯತೆ ನೀಡಬಹುದು.


2.5 : ಲಿಖಿತ ಮೌಲ್ಯಮಾಪನ ಹಮ್ಮಿಕೊಳ್ಳಲು ಸಲಹೆಗಳು:
ಕನ್ನಡ,  ಗಣಿತ,  ಪರಿಸರ  ಅಧ್ಯಯನ,  ಇಂಗ್ಲೀಷ್  ವಿಷಯಗಳ  ಸಾಮಥ್ರ್ಯಕ್ಕೆ  ಪೂರಕವಾಗಿ  ಲಿಖಿತ ಚಟುವಟಿಕೆಗಳನ್ನು ರೂಪಿಸುವುದು.
- ವಸ್ತು, ವಿಚಾರ, ವ್ಯಕ್ತಿ, ಪರಿಸರಕ್ಕೆ ಸಂಬಂಧಿಸಿದ ಸ್ವತಂತ್ರ ಅಭಿವ್ಯಕ್ತಿ ನೀಡುವ ಪ್ರಶ್ನೆ ಬಳಸುವುದು.
- ವೀಕ್ಷಿಸಿ ದಾಖಲಿಸುವ ಅಂಶಗಳು, ನಿಯೋಜಿತ ಕಾರ್ಯಗಳು, ಪತ್ರಗಳು ಹಾಗೂ ವರದಿಗಳ ಬಳಕೆ.
- ಸಮಸ್ಯೆ ಬಿಡಿಸುವಿಕೆ, ಸರಳ ಪ್ರಬಂಧಗಳು, ಸರಳ ಕ್ರಿಯೆಗಳನ್ನು ಬಿಡಿಸುವ ಚಟುವಟಿಕೆ.
- ದತ್ತಾಂಶಗಳ ಸಂಗ್ರಹಣೆ ಮಾಡಿ ಬರೆಯುವ ಕೆಲಸವನ್ನೂ ನೀಡಬಹುದು.
- ಸಾರಾಂಶಗಳ ಕ್ರೋಡೀಕರಣ, ಸ್ವತಂತ್ರ ಸಾಹಿತ್ಯಗಳ ರಚನೆಗಳೀಗೆ (ಕಥೆ, ಕವಿತೆ, ಪ್ರಬಂಧ......) ಅವಕಾಶ.
- ತಾಕರ್ಿಕ ಆಲೋಚನೆಯ ವಿಚಾರಗಳು, ಪ್ರಯೋಗಗಳ ನಿರೂಪಣೆಗಳು.
- ಪುಸ್ತಕ ಸಂಗ್ರಹಿಸಿ ಅಭಿಪ್ರಾಯ ತಿಳಿಸುವುದು, ಕಾರ್ಯಕಾರಣ ಸಂಬಂಧ ಪತ್ತೆಹಚ್ಚುವುದು ಮತ್ತು ವಿವರಿಸುವುದು ಹೀಗೆ ಸಂಕಲನಾತ್ಮಕ ಮೌಲ್ಯಮಾಪನವನ್ನು ಕೇವಲ ಸ್ಮರಣೆ/ ಪೇಪರ್ ಪೆನ್ಸಿಲ್ ಟೆಸ್ಟ್ಗೆ ಸೀಮಿತಗೊಳಸದೇ ಮಗುವನ್ನು ವಿವಿದ ಆಯಾಮಗಳಿಂದ ಮೌಲ್ಯೀಕರಿಸಬಹುದು.

2.6: ಐದರಿಂದ ರಿಂದ ಒಂಭತ್ತನೇ ತರಗತಿಯವರಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ.
1 ಸ್ಕೊಲ್ಯಾಸ್ಟಿಕ್ ವಿಷಯಗಳಲ್ಲಿ ಸಂಕಲನಾತ್ಮಕ ಮೌಲ್ಯಮಾಪನವನ್ನು 5 ರಿಂದ 9ನೇ ತರಗತಿಯವರೆಗೆ 50 ಅಂಕಗಳಿಗೆ (40 ಲಿಖಿತ + 10 ಮೌಖಿಕ) ಪ್ರತಿ ವಿಷಯದಲ್ಲಿ ಹಮ್ಮಿಕೊಳ್ಳುವುದು. ನಂತರ ಅದನ್ನು ಶೇ. 30 ಕ್ಕೆ ಪರಿವರ್ತಿಸಿಕೊಳ್ಳುವುದು. ಆದರೆ 9ನೇ ತರಗತಿಯ ಎರಡನೇ ಸಂಕಲನಾತ್ಮಕ ಮೌಲ್ಯಮಾಪನವನ್ನು ಇಡೀಶೈಕ್ಷಣಿಕ ವರ್ಷದ ಪಠ್ಯವನ್ನು ಆಧರಿಸಿ 100 ಅಂಕಗಳಿಗೆ ಕೈಗೊಳ್ಳುವುದು (90 ಲಿಖಿತ + 10 ಮೌಖಿಕ) ನಂತರ ಅದನ್ನು 60% ಕ್ಕೆ ಪರಿವರ್ತಿಸಿಕೊಳ್ಳುವುದು.
2  ಮಕ್ಕಳ ಪ್ರಗತಿಯನ್ನು ಪಠ್ಯ ವಿಷಯ, ಸಾಮಾಜಿಕ-ವೈಯಕ್ತಿಕ ಕೌಶಲಗಳ ಆಯಾಮಗಳಲ್ಲಿ ಈ ಕೆಳಕಂಡ ಅವಧಿಗಳಲ್ಲಿ ಗುರುತಿಸುವುದು.
3  ಹೀಗೆ ಪ್ರಗತಿಯನ್ನು ಶೇಕಡವಾರು ಈ ಕೆಳಗೆ ನೀಡಿದ ಪ್ರಮಾಣಕ್ಕೆ ಪರಿವರ್ತಿಸಿಕೊಂಡು ಗ್ರೇಡ್ ನೀಡುವುದು.
4 ವಾರ್ಷಿಕವಾಗಿ ಕನಿಷ್ಠ ನಾಲ್ಕು ಬಾರಿ ಮಕ್ಕಳ ಎಲ್ಲಾ ಕ್ಷೇತ್ರದ ಸಮಗ್ರ ಪ್ರಗತಿಯನ್ನು ಪೋಷಕರ ಗಮನಕ್ಕೆ ತರುವುದು.
5 ಕಲಾ ಶಿಕ್ಷಣ, ಕಾರ್ಯಾನುಭವ ಮತ್ತು ಕಂಪ್ಯೂಟರ್ ಶಿಕ್ಷಣದ ಶ್ರೇಣಿಯನ್ನು ಶಾಲೆಯಲ್ಲಿ ಸಂಬಂಧಿಸಿದ ವಿಷಯಗಳನ್ನು ಬೋಧಿಸುವ ಶಿಕ್ಷಕರಿದ್ದಲ್ಲಿ ಮಾತ ದಾಖಲಿಸುವುದು. ಇಲ್ಲದಿದ್ದಲ್ಲಿ ಸಹಪಠ್ಯ ವಿಷಯದ ಭಾಗದಲ್ಲಿ ನಮೂದಿಸುವುದು.

2.7 : ತೇರ್ಗಡೆ ನಿಯಮಗಳು :
ಈ ಹಿಂದೆ ಇದ್ದ "ಸಿ+" ಶ್ರೇಣಿ ಪರಿಷ್ಕೃತ ಸಿ.ಸಿ.ಇ ಅಡಿಯಲ್ಲಿ "ಬಿ" ಶ್ರೇಣಿಗೆ ಸಮವಾಗಿರುತ್ತದೆ. ಹಾಗೆಯೇ ಕೋ-ಸ್ಕೊಲ್ಯಾಸ್ಟಿಕ್ ಕ್ಷೇತ್ರದಲ್ಲಿ "ಬಿ" ಶ್ರೇಣಿ ಅನ್ನು ಪರಿಗಣಿಸಿ ಮಗುವಿನ ಫಲಿತಾಂಶ ನೀಡುವುದು. ವಿದ್ಯಾಥರ್ಿಗಳು ಆಯಾ ತರಗತಿಯಲ್ಲಿ ನಿಗಧಿಪಡಿಸಿದ ಎಲ್ಲ ವಿಷಯ (ಪಠ್ಯ ಮತ್ತು ಸಹಪಠ್ಯ) ಗಳಲ್ಲಿ "ಬಿ" ಶ್ರೇಣಿ ಪಡೆಯುವುದು ಅವಶ್ಯಕ. ಕೊರತೆಗಳಿದ್ದಲ್ಲಿ ನಿರಂತರ ಹಿಮ್ಮಾಹಿತಿ, ಬೆಂಬಲ, ಆತ್ಮವಿಶ್ವಾಸದ ಚಟುವಟಿಕೆಗಳು ಮತ್ತು ಸೇತುಬಂಧ ಚಟುವಟಿಕೆಗಳ ಮೂಲಕ ಮಗುವಿನ ಪ್ರಗತಿಗೆ ಶ್ರಮಿಸುವುದು.
1  ಒಂದು ವೇಳೆ "ಬಿ' ಶ್ರೇಣಿ ಪಡೆಯದಿದ್ದಲ್ಲಿ ವಿದ್ಯಾಥರ್ಿಯ ಸಾಧನೆಯನ್ನು ಪ್ರಾರಂಭದಿಂದಲೆ ಗುರುತಿಸಿ ನಿರಂತರ ಹಿಮ್ಮಾಹಿತಿ, ಬೆಂಬಲ ಮತ್ತು ಸೇತುಬಂಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಗುವಿನ ಪ್ರಗತಿಗೆ ಶ್ರಮಿಸುವುದು ಕಡ್ಡಾಯ.
2  ಆರ್.ಟಿ.ಇ-2009ರ  ಅನ್ವಯ  14  ವರ್ಷ  ವಯೋಮಿತಿಯವರೆಗೆ  ಯಾವುದೇ  ಮಕ್ಕಳನ್ನು  ನಿಲುಗಡೆ ಗೊಳಿಸುವಂತಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. (ಹೆಚ್ಚಿನ ಮಾಹಿತಿಗೆ ಸೌರಭ ಸಾಹಿತ್ಯವನ್ನು ಓದಿ)

ಅಧ್ಯಾಯ:3
ಪರಿಷ್ಕರಣೆಯಲ್ಲಿನ ಪ್ರಮುಖಾಂಶಗಳು..............

3.1:  1 ರಿಂದ 4ನೇ ತರಗತಿ............

ಇಲ್ಲಿ  ಕಲಿಕಾ  ಪ್ರಕ್ರಿಯೆಯು  ಸಾಮಥ್ರ್ಯಧಾರಿತವಾಗಿದ್ದು  ಅದನ್ನು  ಕ್ಷೇತ್ರವಾರು  ಆದ್ಯತೆ  ನೀಡಿ  ಸಾಧನೆಯನ್ನು ದಾಖಲಿಸಲಾಗುತ್ತಿತ್ತು.

ಹೀಗೆ  ದಾಖಲಿಸುವಾಗ  ಒಂದೇ  ಘಟಕದಲ್ಲಿ  ಒಂದಕ್ಕಿಂತ  ಹೆಚ್ಚಿನ  ಕ್ಷೇತ್ರಗಳಿಗೆ  ಆದ್ಯತೆ  ನೀಡಬೇಕಾದ ಸಂದರ್ಭಗಳು ಒದಗಿದಾಗ ಕಷ್ಟಸಾಧ್ಯ ಎಂಬ ಹಿಮ್ಮಾಹಿತಿಯನ್ನು ಆಧರಿಸಿ ವಿಷಯವನ್ನು ಇಡಿಯಾಗಿ ನೋಡಿ ಸಾಧನೆಯನ್ನು ನಮೂದಿಸುವ ಕ್ರಮವನ್ನು  ಅಳವಡಿಸಿಕೊಳ್ಳಲಾಗಿದೆ.

ಸಹಪಠ್ಯಭಾಗದಲ್ಲಿ  ಮೌಲ್ಯಶಿಕ್ಷಣವನ್ನು  ವೈಯಕ್ತಿಕ  ಮತ್ತು  ಸಾಮಾಜಿಕ  ಬೆಳವಣಿಗೆ  ಕ್ಷೇತ್ರದೊಳಗೆ  ಸೇರ್ಪಡೆ ಮಾಡಲಾಗಿದೆ      ಹಾಗೂ      ಸಾ.ಉ.ಉ.ಕಾ      (ಖಗಕಘ)ವನ್ನು      ಹೊಸದಾಗಿ(ಕೆ.ಸಿ.ಎಫ್-2007 ಆಧಾರಿತವಾಗಿ)ಸೇರಿಸಲಾಗಿದೆ ಮತ್ತು ಸಹಪಠ್ಯ ವಿಷಯಗಳಿಗೆ ಉಪ ಅಂಶಗಳನ್ನು ಆಧರಿಸಿ ದಾಖಲಿಸುವ ಬದಲಿಗೆ ಸೆಮಿಸ್ಟರ್ಗೆ ಒಮ್ಮೆ ದಾಖಲಿಸುವ ಮೂಲಕ ಸರಳಗೊಳಿಸಲಾಗಿದೆ.

ಸಹಪಠ್ಯಭಾಗದಲ್ಲಿ ಈ ಹಿಂದೆ ಇದ್ದ 4 ಶೀರ್ಷಿಕೆಗಳು ಹಾಗೂ ಅದರ 18 ಉಪ ಅಂಶಗಳನ್ನು ಸಮನ್ವಯಗೊಳಿಸಿ 5 ಶೀರ್ಷಿಕೆಗಳು ಹಾಗೂ 15 ಉಪ ಅಂಶಗಳನ್ನಾಗಿ ಮಾರ್ಪಡಿಸಲಾಗಿದೆ. ಈ ಹಿಂದೆ ಪ್ರತಿ ಸೆಮಿಸ್ಟರ್ಗೆ ಪ್ರತಿ ಉಪ ಅಂಶವನ್ನು 3 ಬಾರಿಯಂತೆ ಒಟ್ಟ 54 ಬಾರಿ ನಮೂದಿಸಲಾಗುತ್ತಿತ್ತು. ಆದರೆ ಈಗ ಪ್ರತಿ ಸೆಮಿಸ್ಟರ್ಗೆ ಪ್ರತಿ ಉಪಅಂಶವನ್ನು ಒಮ್ಮೆ ಮಾತ್ರ ನಮೂದಿಸುವಂತೆ ಸರಳಗೊಳಿಸಲಾಗಿದೆ.

3.2 : 5 ರಿಂದ 8ನೇ ತರಗತಿ.............

ಇಲ್ಲಿ ಅಅಇ  ಯ ತತ್ವ ಮತ್ತು ಪ್ರಕ್ರಿಯೆಯು ನಿರಂತರವಾಗಿದ್ದು ಯಾವುದೇ ಬದಲಾವಣೆಯಾಗಿರುವುದಿಲ್ಲ.  ಮಕ್ಕಳ ವೈಯಕ್ತಿಕ ನಮೂದು ದಾಖಲೆಯಲ್ಲಿ ಜ್ಞಾನವಲಯ ಮತ್ತು ತೊಡಗಿಸಿಕೊಳ್ಳುವಿಕೆಯ ಅಂಶಗಳನ್ನು 'ಚುಕ್ಕಿ' ಅಥವಾ 'ಸರಿ' ಗುರ್ತಿನೊಂದಿಗೆ ನಮೂದಿಸಿ ನಂತರ ಕ್ರೋಢೀಕರಿಸಿ ಮಕ್ಕಳ ಸಾಧನೆಯನ್ನು ಇದುವರೆಗೆ ನಿರ್ಧರಿಸಲಾಗುತ್ತಿತ್ತು. ಯಾವ ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಮಾಡಬೇಕು, ಒಂದು ಚಟುವಟಿಕೆಯಲ್ಲಿ ಮಗುವಿನ ಭಾಗವಹಿಸುವಿಕೆ ಹೇಗಿದೆ  ಎಂಬುದನ್ನು  ನಿರ್ಧರಿಸುವ  ಕೌಶಲವು  ನಮ್ಮಲ್ಲಿ  ಈಗಾಗಲೇ  ಅಂತರ್ಗತವಾಗಿರುವುದರಿಂದ  ಎಲ್ಲಾ ಸಂದರ್ಭಗಳಲ್ಲಿ  ಪ್ರತೀ  ಅಂಶವನ್ನು  ವೈಯಕ್ತಿಕವಾಗಿ  ದಾಖಲಿಸದೆ  ಒಟ್ಟಾರೆ  ಸಾಧನೆಯನ್ನು  ಘಟಕವಾರು ನಮೂದಿಸುವುದು.

ಪಠ್ಯಭಾಗದಲ್ಲಿ ಕಲಾಶಿಕ್ಷಣ/ಕಾರ್ಯನುಭವ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ಅಳವಡಿಸಿದ್ದು ಸಂಬಂಧಿಸಿದ ಶಿಕ್ಷಕರ ಲಭ್ಯತೆ ಇದ್ದರೆ ಮಾತ್ರ ಈ ವಿಷಯಗಳ ಮೌಲ್ಯಮಾಪನ ಕೈಗೊಂಡು ಪ್ರಗತಿಯ ದಾಖಲೆಯನ್ನು ನಮೂದಿಸುವುದು. ಆಯಾ  ವಿಷಯವಾರು      ಶಿಕ್ಷಕರಿಲ್ಲದ   ಶಾಲೆಗಳಲ್ಲಿ   ಕಲಾಶಿಕ್ಷಣ/ಕಾರ್ಯನುಭವದ   ಚಟುವಕಟಿಕೆಗಳನ್ನು ಸಹಪಠ್ಯಭಾಗಗಳ ಲಲಿತ ಕಲೆ ಮತ್ತು ಸೃಜನಶೀಲತೆಯ ಅಡಿಯಲ್ಲಿ ಪರಿಗಣಿಸಲಾಗುವುದು.

ಕಂಪ್ಯೂಟರ್ ಸೌಲಭ್ಯವಿರುವ ಶಾಲೆಗಳಲ್ಲಿ ಅದನ್ನು ನಿರ್ವಹಿಸುತ್ತಿರುವ ಶಿಕ್ಷಕರು ಪ್ರಗತಿ ದಾಖಲೆಯಲ್ಲಿ ವಿವರವನ್ನು ನಮೂದಿಸುವುದು.ಸಹಪಠ್ಯಭಾಗದಲ್ಲಿ ಈ ಹಿಂದೆ ಇದ್ದ 3 ಶೀಷರ್ಿಕೆಗಳು ಹಾಗೂ ಅದರ 68 ಉಪ ಅಂಶಗಳನ್ನು ಸಮನ್ವಯಗೊಳಿಸಿ "ಭಾವನಾತ್ಮಕ - ಸಾಮಾಜಿಕ ಕೌಶಲಗಳು, ಸಂಘಟನಾ ಕೌಶಲ, ವೈಜ್ಞಾನಿಕ ಕೌಶಲಗಳು, ಲಲಿತಕಲೆ, ಸೃಜನಶೀಲತೆ, ಮನೋಧೋರಣೆ ಹಾಗೂ ಮೌಲ್ಯಗಳು ಎಂಬ 7 ಶೀಷರ್ಿಕೆಗಳ ಅಡಿಯಲ್ಲಿ 21 ಉಪ ಅಂಶಗಳನ್ನು ನೀಡಿದ್ದು ಅವುಗಳನ್ನು ಪ್ರತಿ ಸೆಮಿಸ್ಟರ್ಗೆ ಒಮ್ಮೆ ಮಾತ್ರ ನಮೂದಿಸುವಂತೆ ಸರಳಗೊಳಿಸಲಾಗಿದೆ.

ವಿಶೇಷ  ಸಾಧನೆಯ  ಕ್ಷೇತ್ರಗಳ  ವ್ಯಾಪ್ತಿಯನ್ನು  ವಿಸ್ತರಿಸಲಾಗಿದ್ದು,  ಇಲ್ಲಿ  ಪ್ರಾದೇಶಿಕವಾಗಿ  ಮಹತ್ವವೆನಿಸಿರುವ (ಜನಪ್ರಿಯ) ದೇಸೀ ಆಟಗಳು ಪರಿಗಣಿಸಲ್ಪಡುತ್ತವೆ. ಉದಾ: ಕಂಬಳ, ಮಲ್ಲಗಂಬ ಇತ್ಯಾದಿ.

3.3: 9ನೇ ತರಗತಿಯಲ್ಲಿ...........

5 ರಿಂದ 8ನೇ ತರಗತಿಯಲ್ಲಿ ಮಾಡಿಕೊಂಡಿರುವ ಬದಲಾಣೆಗಳು 9ನೇ ತರಗತಿಯಲ್ಲಿಯೂ ಮುಂದುವರೆದಿದೆ. ಇಲ್ಲಿ 10ನೇ ತರಗತಿಗೆ ಪೂರಕವಾದ ಮೌಲ್ಯಮಾಪನವನ್ನು ಕೈಗೊಳ್ಳಬೇಕಾಗಿರುವುದರಿಂದ 2ನೇ ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಇಡೀ ಪಠ್ಯವನ್ನು ಒಳಪಡಿಸಲಾಗುತ್ತದೆ. ಅಂದರೆ 1ನೇ ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಪರಿಗಣಿಸಿದ ಘಟಕಗಳು ಮತ್ತೊಮ್ಮೆ ಮೌಲ್ಯಮಾಪನಕ್ಕೆ ಒಳಪಡುವುದರಿಂದ ಕೆಳಕಂಡಂತೆ ಬದಲಾವಣೆಯನ್ನು ಮಾಡಲಾಗಿದೆ. ಅವುಗಳೆಂದರೆ, ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಕ್ರೋಡೀಕರಣದ ಶೇಕಡಾ 40 ಹಾಗೂ ಎರಡನೇ ಸಂಕಲನಾತ್ಮಕ  ಮೌಲ್ಯಮಾಪನದ ಶೇಕಡಾ 60 ಒಟ್ಟು ಸೇರಿ ಶೇಕಡಾ 100ಕ್ಕೆ ಮಗುವಿನ ಸಾಧನೆಯನ್ನು ನಿರ್ಧರಿಸಲಾಗುತ್ತದೆ.

ಮೊದಲನೇ  ಸಂಕಲನಾತ್ಮಕ  ಮೌಲ್ಯಮಾಪನದಲ್ಲಿ  ವಿದ್ಯಾಥರ್ಿಯ  ಪ್ರಗತಿಯ  ಶೇಕಡಾ  30ರಷ್ಟನ್ನು  ವೈಯಕ್ತಿಕ, ಕ್ರೋಢೀಕೃತ ಹಾಗೂ ಪ್ರಗತಿಪತ್ರದಲ್ಲಿ ಮಾತ್ರ ನಮೂದಿಸಲಾಗುತ್ತದೆ.

ಗಮನಿಸಿ:  1 ರಿಂದ 9ನೇ ತರಗತಿಗಳಲ್ಲಿನ ಸಹಪಠ್ಯಭಾಗದಲ್ಲಿ ಶ್ರೇಣಿಗಳನ್ನು ನಮೂದಿಸಲು ಮಾನಕಗಳನ್ನು ಗುರ್ತಿಸಿಕೊಂಡು ಅವಲೋಕಿಸಿ ವೈಯಕ್ತಿಕ  (ಅಂಕವಹಿಯಲ್ಲಿ) ದಾಖಲೆಯಲ್ಲಿ  ಬರೆದುಕೊಳ್ಳುವುದರಿಂದ  ಪ್ರಗತಿ ಪತ್ರದಲ್ಲಿ ವಿವರಣಾತ್ಮಕ ಮಾನಕಗಳನ್ನು ಕೈಬಿಡಲಾಗಿದೆ. ಆದರೆ ಪೋಷಕರೊಂದಿಗೆ ಎಲ್ಲ ಅಂಶಗಳನ್ನು ಮಗುವಿನ ಸಾಧನೆಯಿರುವ ಶಿಕ್ಷಕರ ವೈಯಕ್ತಿಕ ದಾಖಲೆಯನ್ನು ಆಧರಿಸಿ ಮನವರಿಕೆ ಮಾಡಿಕೊಡುವುದು ಕಡ್ಡಾಯ.

3 .4 : ಅಭ್ಯಾಸ ಪುಸ್ತಕ

ಅಭ್ಯಾಸ  ಪುಸ್ತಕಗಳನ್ನು  ರಚನಾವಾದ  ಹಾಗೂ  ನಿರಂತರ  ಮತ್ತು  ವ್ಯಾಪಕ  ಮೌಲ್ಯಮಾಪನದ  ತತ್ವಗಳನ್ನು ಅಳವಡಿಸಿಕೊಂಡು ರೂಪಿಸಿರುವುದರಿಂದ ಇದನ್ನು ಬಹುಪಯೋಗಿ ಸಾಧನವಾಗಿ ಬಳಸಬಹುದಾಗಿದೆ.
*ಕಲಿಕೆಯನ್ನು ಅನುಕೂಲಿಸುವ ಚಟುವಟಿಕಯ ಭಾಗವಾಗಿ ಅಭ್ಯಾಸ ಪುಸ್ತಕ : ಅಭ್ಯಾಸ ಪುಸ್ತಕದ ಚಟುವಟಿಕೆಗಳನ್ನು ಕಲಿಕೆಯ ಚಟುವಟಿಕೆಗಳಾಗಿಯೂ ಬಳಸಬಹುದು. ಉದಾ : 6 ನೇ ತರಗತಿ ಕನ್ನಡ ಅಭ್ಯಾಸ ಪುಸ್ತಕದ ಪುಟ-5ರಲ್ಲಿರುವ ಈ ಪದಗಳನ್ನು ಓದಿ ಗ್ರಹಿಸಿರಿ.
*ಮೌಲ್ಯಮಾಪನದ ಚಟುವಟಿಕೆಯ ಭಾಗವಾಗಿ ಅಭ್ಯಾಸ ಪುಸ್ತಕ : ಕಲಿಕೆಯನ್ನು ದೃಢಪಡಿಸುವ ರೂಪಣಾತ್ಮಕ ಮೌಲ್ಯಮಾಪನದ ಚಟುವಟಿಕೆಯನ್ನಾಗಿ ಅಳವಡಿಸುವುದು. ಉದಾ: 6ನೇ ತರಗತಿ ಕನ್ನಡ ಅಭ್ಯಾಸ ಪುಸ್ತಕದ ಪುಟ ಸಂಖ್ಯೆ 3 ರಲ್ಲಿರುವ ಈ ಪದಗಳನ್ನು ಸ್ಪಷ್ಟವಾಗಿ ಓದಿ
ಶಬ್ದಕೋಶದ ಸಹಾಯದಿಂದ ಅರ್ಥವನ್ನು ಬರೆಯಿರಿ.
*ಮೌಲ್ಯಮಾಪನದ ಸಾಧನವಾಗಿ ಅಭ್ಯಾಸ ಪುಸ್ತಕ.ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕಾಗಿ ಬಳಸುವ ಸಾಧನವಾಗಿಯೂ ಅಭ್ಯಾಸ ಪುಸ್ತಕಗಳನ್ನು ಬಳಸಬಹುದು.
ಉದಾ :ಕನ್ನಡ ಅಭ್ಯಾಸ ಪುಸ್ತಕ ಪುಟಸಂಖ್ಯೆ 15 ರ (ಆ) ಮತ್ತು (ಇ) ಚಟುವಟಿಕೆ.
* ಸ್ವಮೌಲ್ಯಮಾಪನ ಸಾಧನವಾಗಿ ಅಭ್ಯಾಸ ಪುಸ್ತಕ.ತನ್ನ ಕಲಿಕೆಯನ್ನು ಮೌಲ್ಯಮಾಪನ ಮಾಡಿಕೊಳ್ಳಲು ಸ್ವಮೌಲ್ಯಮಾಪನ ಸಾಧನವಾಗಿ ಬಳಸಿಕೊಳ್ಳಬಹುದು.
*ಮೌಲ್ಯಮಾಪನದ ತಂತ್ರವಾಗಿ ಅಭ್ಯಾಸ ಪುಸ್ತಕದಲ್ಲಿರುವ ಚಟುವಟಿಕೆಗಳನ್ನು ಆಯ್ಕೆ ಮಾಡಿದಾಗ ಪೂರಕವಾಗಿ ಸಾಧನವನ್ನು ತಯಾರಿಸಿಕೊಳ್ಳಬೇಕಾಗಿದೆ.ಉದಾ : ಕನ್ನಡ ಅಭ್ಯಾಸ ಪುಸ್ತಕದ ಪುಟ ಸಂಖ್ಯೆ 10 ರ (ಆ) ನಲ್ಲಿ ಕೊಟ್ಟಿರುವ ಸನ್ನಿವೇಶಗಳನ್ನು ವೀಕ್ಷಿಸಿ 'ಅದರ
ಕುರಿತು ಮಾತನಾಡಿರಿ' ಎಂಬ ಚಟುವಟಿಕೆಗೆ ತಾಳೆಪಟ್ಟಿಯನ್ನು ಹೀಗೆ ಸಿದ್ಧಪಡಿಸಿಕೊಳ್ಳಬಹುದು.
 

tp