ಸಾಮಾಜಿಕ ಪಿಡುಗುಗಳು

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲

 ಸಾಮಾಜಿಕ ಪಿಡುಗುಗಳು : ವರದಕ್ಷಿಣೆ ಮತ್ತು ಅದರ ನಿವಾರಣೆ
ಪ್ರಸ್ತಾವನೆ :- ತಲೆತಲಾಂತರದಿಂದ ಸಮಾಜಕ್ಕೆ ಅಂಟಿಕೊಂಡು ಬಂದ ಸಾಮಾಜಿಕ ಪಿಡುಗುಗಳಿವೆ. ವರದಕ್ಷಿಣೆ, ಸತಿ ಪದ್ಧತಿ, ಬಾಲ್ಯವಿವಾಹ, ಅಸ್ಪೃಶ್ಯತೆ, ಕುಡಿತ, ಜೀತ ಪದ್ಧತಿ, ದೇವದಾಸಿ ಇತ್ಯಾದಿ. ಇವೆಲ್ಲೂ ನಮ್ಮ ಸಮಾಜದಲ್ಲಿ ಬೇರು ಬಿಟ್ಟವುಗಳು. ಯಾವ ಶಾಸನಕ್ಕೂ ಜಗ್ಗದವುಗಳು. ಇವುಗಳಿಂದ ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಇವುಗಳು ಒಂದು ಸುಂದರ ನಾಗರಿಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿವೆ.

ವಿಷಯ ನಿರೂಪಣೆ :- ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ಹೆಣ್ಣು ಹೆತ್ತವರು ಮದುವೆಯ ಗಂಡಿಗೆ ಕೊಡಬೇಕಾದ ದಕ್ಷಿಣೆ. ಇದು ಅವರವರ ಅಂತಸ್ತಿಗೆ ಅನುಸಾರವಾಗಿ ಸಾವಿರ ಲಕ್ಷಗಳ ಮೊತ್ತದಲ್ಲಿರುತ್ತದೆ. ವರದಕ್ಷಿಣೆಯನ್ನು ಮೊದಮೊದಲು ಹೆಣ್ಣು ಹೆತ್ತವರು ಪ್ರೀತಿಯಿಂದ ಕೊಡುತ್ತಿದ್ದರು. ಕೊಡಲೇ ಬೇಕೆಂಬ ಒತ್ತಾಯವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ವರದಕ್ಷಿಣೆ ಕೊಡುವುದು ಕಡ್ಡಾಯ ಎನ್ನುವಂತೆ ಆಗಿದೆ. ಗಂಡುಗಳು ಸಹ ವರದಕ್ಷಿಣೆ ಪಡೆಯುವುದು ತಮ್ಮ ಹಕ್ಕು ಎನ್ನುವಂತೆ ವರ್ತಿಸುತ್ತಿದ್ದಾರೆ. ವರದಕ್ಷಿಣೆ ಕೊಡದಿದ್ದರೆ ಹೆಣ್ಣಿಗೆ ಸೂಕ್ತ ಗಂಡು ದೊರೆಯುವುದಿಲ್ಲ ಎಂಬ ಭಯದಿಂದ ಹೆಣ್ಣು ಹೆತ್ತವರು ಆಸ್ತಿ ಅಡವಿಟ್ಟು ಅಥವಾ ಸಾಲ ಮಾಡಿ ಈ ಹಣವನ್ನು ಹೊಂದಿಸಿಕೊಂಡು ಗಂಡಿಗೆ ಕೊಡುತ್ತಾರೆ. ವರದಕ್ಷಿಣೆಯ ಮೊತ್ತವನ್ನು ಮದುವೆಯ ಸಮಯದಲ್ಲಿ ಪೂರ್ಣವಾಗಿ ಕೊಡಲಾಗದೆಬಾಕಿ ಉಳಿಸಿಕೊಂಡರೆ ಬಾಕಿ ಹಣ ತರುವ ತನಕ ಹೆಣ್ಣಿಗೆ ಗಂಡನ ಮನೆಯಲ್ಲಿ ಕಿರುಕುಳ. ಇಲ್ಲಿ ಹಣವೇ ಪ್ರಧಾನವಾಗಿ ಪ್ರೀತಿಯು ಗೌಣವಾಗಿ, ಹೆಣ್ಣು ಗಂಡಿನ ಬಾಂಧವ್ಯದಲ್ಲಿ ದೊಡ್ಡ ಬಿರುಕು ಉಂಟಾಗುತ್ತಿದೆ. ಸರ್ಕಾರ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ತಂದಿದೆ. ಆದರೂ ಅದು ಸಮರ್ಪಕವಾಗಿ ಅನುಷ್ಟಾನಗೊಳ್ಳುತ್ತಿಲ್ಲ. ಸಮಾಜದ ಜನರ ಮನಃಪರಿವರ್ತನೆಯಾಗದೆಯಿದ್ದರೆ ಯಾವ ಕಾನೂನು ಬಂದರೂ ಪ್ರಯೋಜನವಿಲ್ಲ.ವರ ಹಾಗೂ ವರನ ಕಡೆಯವರು ಹೆಣ್ಣು ಹೆತ್ತವರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು.

ಉಪಸಂಹಾರ :- ಪ್ರೇಮವಿವಾಹಗಳಿಗೆ ಪ್ರೋತ್ಸಾಹ ನೀಡುವುದು. ವರದಕ್ಷಿಣೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು. ಮದುವೆ ಎಂಬುದು ಒಂದು ವ್ಯಾಪಾರವಲ್ಲ ಅದೊಂದು ಪ್ರೀತಿಯ ಬಾಂಧವ್ಯ ಎಂಬ ಅರಿವನ್ನು ಮೂಡಿಸುವುದು. ಹೆಣ್ಣು ಮಕ್ಕಳು ವರದಕ್ಷಿಣೆ ಕೇಳುವ ಗಂಡನ್ನು ಮದುವೆಯಾಗದೆ ಬಹಿಷ್ಕರಿಸುವುದು. ವರದಕ್ಷಿಣೆ ಕಿರುಕುಳ ನೀಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದು. ಮೊದಲಾದ ಕ್ರಮಗಳಿಂದ ವರದಕ್ಷಿಣೆ ಪಿಡುಗನ್ನು ತಡೆಗಟ್ಟಬಹುದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ.

ಕಂಪ್ಯೂಟರ್ :-
ಪ್ರಸ್ತಾವನೆ : ಅಧುನಿಕ ಯುಗವನ್ನು ಕಂಪ್ಯೂಟರ್ ಯುಗವೆಂದು ಕರೆಯುತ್ತಾರೆ. ಕಂಪ್ಯೂಟರನ್ನು ಕನ್ನಡದಲ್ಲಿ 'ಗಣಕ ಯಂತ್ರ' ಎಂದು ಕರೆಯುತ್ತಾರೆ. ಚಾಲ್ಸರ್್ ಬಾಬೇಜ್ ಎಂಬ ವಿಜ್ಞಾನಿಯು ಕಂಪ್ಯೂಟರನ್ನು ಕಂಡುಹಿಡಿದನು.

ವಿಷಯ ನಿರೂಪಣೆ : ಕಂಪ್ಯೂಟರನಲ್ಲಿ ಹಾಡರ್್ವೇರ್ ಮತ್ತು ಸಾಫ್ಟ್ವೇರ್ ಎಂಬ ಎರಡು ಮುಖ್ಯ ಭಾಗಗಳಿವೆ. ಕಣ್ಣಿನಿಂದ ನೋಡಬಲ್ಲ ಹಾಗೂ ಕೈಯಿಂದ ಮುಟ್ಟಬಲ್ಲ ಕಂಪ್ಯೂಟರನ ವಿವಿಧ ಬಾಗಗಳನ್ನು ಹಾರ್ಡ್ ವೇರ್ ಎಂದು ಕರೆಯುತ್ತಾರೆ. ನಾವು ಒದಗಿಸುವ ಮಾಹಿತಿಗಳಿಗೆ ಕಂಪ್ಯೂಟರಿಂದ ಹೊರಬರುವ ಪರಿಹಾರಗಳನ್ನು ಸಾಫ್ಟ್ವೇರ್ ಎಂದು ಕರೆಯುತ್ತಾರೆ. ಕಂಪ್ಯೂಟರಿಂದ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಹು ಸುಲಭವಾಗಿ, ವೇಗವಾಗಿ ಬಿಡಿಸಬಹುದು. ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಉಪಗ್ರಹ ತಂತ್ರಜ್ಞಾನ, ದೂರ ಸಂಪರ್ಕ, ವಿಜ್ಞಾನ, ವ್ಯಾಪಾರ, ಆಡಳಿತ, ರೈಲ್ವೆ, ವಿಮಾನ, ಸಾರಿಗೆ ಹೋಟೆಲ್, ಶಿಕ್ಷಣದಲ್ಲೂ ಸಹ ವ್ಯಾಪಕವಾಗಿ ಬಳಕೆಯಲ್ಲಿದೆ. ಇಂದು ಕಂಪ್ಯೂಟರ್ ಕಲಿಯದವನು ವೃತ್ತಿ ಪಡೆಯಲು ಸಾಧ್ಯವಿಲ್ಲವೆಂಬ ಪರಿಸ್ಥಿತಿಯು ನಿಮರ್ಾಣವಾಗಿದೆ.

ಉಪಸಂಹಾರ : ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಕಂಪ್ಯೂಟರ್ನ ಅಂತಜರ್ಾಲದಿಂದ ಬೇಕಾದ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದೆ. ಕಂಪ್ಯೂಟರ್ ಆಧುನಿಕ ಯುಗದ ಅಪೂರ್ವ ಕೊಡುಗೆ ಎಂದು ನಿಸ್ಸಂಶಯವಾಗಿ ಹೇಳಬಹುದು.
 

ನಮ್ಮ ಪರಿಸರ :-
ಪ್ರಸ್ತಾವನೆ : ನಮ್ಮ ಸುತ್ತಮುತ್ತಲೂ ಇರುವ ಗಾಳಿ, ನೀರು, ಮರ,ಗಿಡ, ಪ್ರಾಣಿ, ಪಕ್ಷಿಗಳು, ಪರ್ವತ, ನದಿ ಒಟ್ಟಾರೆ ಭೌತಿಕ ಹಾಗೂ ಅಭೌತಿಕ ಎಲ್ಲವನ್ನೂ 'ನಮ್ಮ ಪರಿಸರ' ಎನ್ನಬಹುದು. ಜೀವಿಯ ಮೇಲೆ ಜೈವಿಕವಾಗಿ ಪರಿಣಾಮ ಬೀರುವ ಎಲ್ಲ ಬಾಹ್ಯ ಕಾರಣಗಳನ್ನು ಒಟ್ಟಾರೆ 'ಪರಿಸರ' ಎಂದು ಹೇಳಬಹುದು.  

ವಿಷಯ ನಿರೂಪಣೆ : ಸುಂದರ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಆಧುನಿಕ ಯುಗದ ಮಾನವನ ಅತಿಯಾದ ದಾಹದಿಂದ ಪರಿಸರ ಮಲಿನಗೊಳ್ಳುತ್ತಿದೆ. ಗಾಳಿ, ನೀರು, ಆಕಾಶ, ಮಣ್ಣು ಎಲ್ಲವೂ ಮಾಲಿನ್ಯಗೊಂಡಿವೆ. ಇಂದು ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧ ನೀರು ಹಾಗೂ ಸೇವಿಸಲು ಶುದ್ಧ ಆಹಾರ ದೊರೆಯುತ್ತಿಲ್ಲ. ಇದರಿಂದಾಗಿ ಮಾನವನು ಅನೇಕ ವಿಧವಾದ ರೋಗಗಳಿಂದ ನರಳುತ್ತಿದ್ದಾನೆ. ನಮ್ಮ ಮುಂದಿನ ಜನಾಂಗಕ್ಕೆ ನಾವು ಕೊಡುತ್ತಿರುವ ಬಳುವಳಿ ಎಂದರೆ ಕಲುಷಿತ ಗಾಳಿ. ನೀರು ಹಾಗೂ ಆಹಾರ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಭೂ ಮಾಲಿನ್ಯದಿಂದ ಆಗಿರುವ ಅನಾಹುತಗಳಿಂದ 'ನಮ್ಮ ಪರಿಸರ'ವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ಉಪಸಂಹಾರ : ನದಿ, ಕೆರೆ, ಬಾವಿಗಳ ಹತ್ತಿರ ದನಕರುಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು, ಪಾತ್ರೆ ತೊಳೆಯಬಾರದು, ಅತಿಯಾದ ಶಬ್ದ ಮಾಡುವ, ಹೊಗೆ ಉಗುಳುವ ವಾಹನಗಳನ್ನು ಬಳಕೆ ಮಾಡಬಾರದು, ಪರಿಸರ ಮಾಲಿನ್ಯವನ್ನುಂಟು ಮಾಡುವಂತಹ ಕೈಗಾರಿಕೆಗಳನ್ನು ಸ್ಥಾಪಿಸಲು, ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಮರಗಿಡಗಳನ್ನು ಕಡಿಯದಂತೆ ತಡೆದು ಹಾಗೂ ನೆಡುವಂತೆ ತಿಳಿಹೇಳಬೇಕು. ಕಾಡನ್ನು ಬೆಳೆಸಿ, ನಾಡನ್ನು ಉಳಿಸಿ ಎಂಬ ಧ್ಯೇಯ ವಾಕ್ಯವನ್ನು ಎಲ್ಲೆಡೆ ಬರೆದು ಜನರಲ್ಲಿ ಅರಿವನ್ನುಂಟು ಮಾಡಬೇಕು. ಆಗ ನಮ್ಮ ಪರಿಸರ ಸುಂದರವಾಗುತ್ತದೆ.

 
ಬಾಲ್ಯ ವಿವಾಹ

ಪ್ರಸಾವನೆ :- ತಲೆತಲಾಂತರದಿಂದ ಸಮಾಜಕ್ಕೆ ಅಂಟಿಕೊಂಡು ಬಂದ ಸಾಮಾಜಿಕ ಪಿಡುಗುಗಳು ವರದಕ್ಷಿಣೆ, ಸತಿ ಪದ್ಧತಿ, ಬಾಲ್ಯವಿವಾಹ, ಅಸ್ಪೃಶ್ಯತೆ, ಕುಡಿತ, ಜೀತ ಪದ್ಧತಿ, ದೇವದಾಸಿ ಇತ್ಯಾದಿ. ಇವೆಲ್ಲವೂ ನಮ್ಮ ಸಮಾಜದಲ್ಲಿ ಬೇರು ಬಿಟ್ಟವುಗಳು. ಯಾವ ಶಾಸನಕ್ಕೂ ಜಗ್ಗದವುಗಳು. ಇವುಗಳಿಂದ ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಇವುಗಳು ಒಂದು ಸುಂದರ ನಾಗರಿಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿವೆ.

ವಿಷಯ ನಿರೂಪಣೆ :- ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದಕ್ಕೆ ಮೊದಲು ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬುವುದಕ್ಕೆ ಮೊದಲು ಮಾಡುವ ವಿವಾಹಗಳನ್ನು 'ಬಾಲ್ಯ ವಿವಾಹ' ಎನ್ನುವರು. ಹೆಣ್ಣು ಮಕ್ಕಳಿಗೆ ವಯಸ್ಸು ಆದನಂತರ ಮದುವೆ ಮಾಡಿದರೆ ಸೂಕ್ತ ಗಂಡು ದೊರೆಯುವುದಿಲ್ಲ ಎಂಬ ಹೆತ್ತವರ ಸ್ವಾರ್ಥ ಮನೋಭಾವನೆಯ ಮೂಢನಂಬಿಕೆಯಿಂದ ಇಂತಹ ಮದುವೆಗಳು ನಡೆಯುತ್ತಿವೆ. ಅನಕ್ಷರತೆ ಮತ್ತು ಬಡತನವು ಸಹ ಬಾಲ್ಯ ವಿವಾಹಕ್ಕೆ ಕಾರಣವಾಗಿದೆ. ಸಣ್ಣ ವಯಸ್ಸಿಗೆ ಮದುವೆಯಾದರೆ ಸಂಸಾರದ ಬಗ್ಗೆ ಅರಿವಿಲ್ಲದೆ ಇರುವುದರಿಂದ ಅನೇಕ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ. ದೇಹ ಸದೃಢವಾಗಿಲ್ಲದಿರುವುದರಿಂದ ಸಣ್ಣ ವಯಸ್ಸಿಗೆ ಮದುವೆಯಾದ ಹೆಣ್ಣು ಚಿಕ್ಕ ವಯಸ್ಸಿಗೆ ಮಕ್ಕಳನ್ನು ಹೆರುವುದರಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಹುಟ್ಟಿದ ಮಕ್ಕಳು ಸಹ ಅಪೌಷ್ಟಿಕತೆಯಿಂದ ನರಳುತ್ತಾರೆ. ಬಾಲ್ಯ ವಿವಾಹ ಜನಸಂಖ್ಯಾ ಸ್ಫೋಟಕ್ಕೂ ಸಹ ಕಾರಣವಾಗುತ್ತದೆ. ಆದ್ದರಿಂದ ಭಾರತ ಸರ್ಕಾರ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ತಂದಿದೆ. ಆದರೂ ಅದು ಸಮರ್ಪಕವಾಗಿ ಅನುಷ್ಟಾನಗೊಳ್ಳುತ್ತಿಲ್ಲ. ಸಮಾಜದ ಜನರ ಮನಃಪರಿವರ್ತನೆಯಾಗದೆಯಿದ್ದರೆ ಯಾವ ಕಾನೂನು ಬಂದರೂ ಪ್ರಯೋಜನವಿಲ್ಲ. ತಂದೆ-ತಾಯಿ ಮಕ್ಕಳ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವುದರ ಕಡೆಗೆ ಚಿಂತಿಸದೆ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆಯೂ ಸಹ ಚಿಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹವನ್ನು ಮಾಡಬಾರದು.

ಉಪಸಂಹಾರ :- ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಜನರಿಗೆ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ನಡೆಯುತ್ತಿರುವುದು ನಮಗೆ ತಿಳಿದ ಕೂಡಲೇ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿ ಬಾಲ್ಯ ವಿವಾಹ ನಡೆಯದಂತೆ ತಡೆಗಟ್ಟಬೇಕು. ಬಾಲ್ಯ ವಿವಾಹಕ್ಕೆ ಕಾರಣರಾದ ಎಲ್ಲರಿಗೂ ಕಾನೂನಿನಂತೆ ಶಿಕ್ಷೆ ನೀಡಬೇಕು. ನಮ್ಮ ನಮ್ಮ ಮನೆಗಳಲ್ಲಿ, ಗ್ರಾಮಗಳಲ್ಲಿ ಬಾಲ್ಯ ವಿವಾಹ ಮಾಡದಂತೆ ಮನವಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತಿ ಮೂಡಿಸಿ ಸರ್ಕಾರದೊಡನೆ ಸಹಕರಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ
Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment