How to Download Files in Inyatrust :
Step By Step with Image | Watch Video
ಪದ್ಯಪಾಠ - 2
ಹಕ್ಕಿ ಹಾರುತಿದೆ ನೋಡಿದಿರಾ - ದ. ರಾ. ಬೇಂದ್ರೆ
ಯುಗ-ಯುಗಗಳ ಹಣೆ ಬರೆಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
ಪ್ರಶ್ನೆಗಳು :
1. ಹಕ್ಕಿಯು ಹಣೆ ಬರೆಹವ ಒರೆಸಿ ಏನನ್ನು ತೆರೆಸಿದೆ?
2. ಹಕ್ಕಿಯು ಹೇಗೆ ಚೇತನಗೊಳಿಸಿದೆ?
3. ಹಕ್ಕಿಯು ಯಾರನ್ನು ಹರಸಿದೆ?
4. ಕಾಲಪಕ್ಷಿಯ ಯಾವ ಕಾರ್ಯವನ್ನು ನೀವು ಮೆಚ್ಚುತ್ತೀರಿ ತಿಳಿಸಿ.
ಉತ್ತರಗಳು :
1. ಹಕ್ಕಿಯು ಹಣೆ ಬರೆಹವ ಒರೆಸಿ ಮನ್ವಂತರಗಳ ಭಾಗ್ಯವನ್ನು ತೆರೆಸಿದೆ.
2. ಹಕ್ಕಿಯು ರೆಕ್ಕೆಯ ಬೀಸುತ ಚೇತನಗೊಳಿಸಿದೆ.
3. ಹಕ್ಕಿಯು ಹೊಸಕಾಲದ ಹಸುಮಕ್ಕಳನ್ನು ಹರಸಿದೆ.
4. ಹಕ್ಕಿಯು ಚೇತನಗೊಳಿಸಿ ಹಸುಮಕ್ಕಳನ್ನು ಹರಸಿರುವ ಕಾರ್ಯ ನನಗೆ ಮೆಚ್ಚುಗೆಯಾಗಿದೆ.
(ವಿದ್ಯಾರ್ಥಿಯು ಸ್ವಾಭಿಪ್ರಾಯದ ಸಾಲನ್ನು ಬರೆಯಬಹುದು)
ಪದ್ಯಪಾಠ - 4
ವಚನ ಸೌರಭ - ಜೇಡರ ದಾಸಿಮಯ್ಯ, - ಬಸವಣ್ಣ
ಮರನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾರುತಲಿದೆ
ಬೆಂದಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ ||
ಪ್ರಶ್ನೆಗಳು :
1. ಮನವನ್ನು ಯಾವುದಕ್ಕೆ ಹೋಲಿಸಲಾಗಿದೆ ?
2. ಮರ್ಕಟನ ಸಹಜ ಗುಣವೇನು?
3. ಬಸವಣ್ಣನವರು ಬೆಂದ ಮನಸ್ಸನ್ನು ನಂಬುವುದಿಲ್ಲ ಎನ್ನುವುದನ್ನು ಒಪ್ಪುವಿರಾ ? ಏಕೆ?
4. ಈ ವಚನದಲ್ಲಿ ನೀವು ಮೆಚ್ಚುವ ಅಂಶವೇನು?
ಉತ್ತರಗಳು :
1. ಮನವನ್ನು ಮರ್ಕಟನಿಗೆ ಹೋಲಿಸಲಾಗಿದೆ.
2. ಹಲವು ಕೊಂಬೆಗೆ ಹಾಯುತ್ತಲಿರುವುದು ಮರ್ಕಟನ ಸಹಜ ಗುಣವಾಗಿದೆ.
3. ಮನವೆಂಬುದು ಮರ್ಕಟನಂತೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ ವಿಷಯಾದಿಗಳಲ್ಲೇ ಮುಳುಗಿ ನೋವು ದುಃಖಗಳಲ್ಲಿ ಬೆಂದಮನವಾಗಿದೆ.
4. ಮನವನ್ನು ಮರ್ಕಟನಿಗೆ ಹೋಲಿಸಿ ವರ್ಣಿಸಿರುವುದು.
ಗದ್ಯಪಾಠ - 8
ವ್ಯಾಘ್ರಗೀತೆ - ಎ. ಎನ್. ಮೂರ್ತಿರಾವ್
ರಸ್ತೆಗೆ ಸ್ವಲ್ಪ ದೂರದಲ್ಲೇ ಇದ್ದ ಗುಹೆಯಲ್ಲಿ ಹುಲಿಯೊಂದು ಮಲಗಿತ್ತು. ದಿನವೆಲ್ಲಾ ನಿದ್ದೆಮಾಡಿ ಆಗತಾನೆ ಆಕಳಿಸುತ್ತ ಎದ್ದ ಹುಲಿಗೆ ತನ್ನ ಹೊಟ್ಟೆ ಬರಿದಾಗಿದೆಯೆಂದು ಭಾಸವಾಯಿತು. ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸುತ್ತಾ ಒಂದೆರಡು ಸಾರಿ ಮೈಮುರಿದು ಹೊರಟಿತು. ಬಂಡೆಗಳ ಮರೆಯಲ್ಲೇ ನಡೆಯುತ್ತಿದ್ದಾಗ ಇದ್ದಕ್ಕಿದ್ದಹಾಗೆಯೇ ಮಧುರವಾದ ಗಂಧವೊಂದು ಅದರ ಘ್ರಾಣೇಂದ್ರಿಯವನ್ನು ಆಕ್ರಮಿಸಿತು. ಆ ಸುವಾಸನೆಯ ಜಾಡನ್ನೇ ಹಿಡಿದು ನಿಶ್ಶಬ್ದವಾಗಿ ನಡೆಯುತ್ತಾ ರಸ್ತೆಯ ಬಳಿಗೆ ಬಂದು ಶಾನುಭೋಗರನ್ನು ಕಂಡಿತು. ಅವರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು. ಹುಲಿಯ ಆನಂದಕ್ಕೆ ಕೊರತೆಯೊಂದಿತ್ತು; ಆ ಶಾನುಭೋಗರು ಹುಲಿಗೆ ಅಭಿಮುಖರಾಗಿರದೆ ಅದರ ಕಡೆಗೆ ಬೆನ್ನು ತಿರುಗಿಸಿ ನಡೆಯುತ್ತಿದ್ದರು. ಯಾರನ್ನೇ ಆಗಲಿ, ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೇ.
ಆದ್ದರಿಂದ ಹುಲಿ ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು. ಆದರೆ ಅವರನ್ನು ಹಾದು ಮುಂದೆ ಹೋಗುವುದು ಕಷ್ಟ. ನಿಶ್ಶಬ್ದವಾಗಿ ಅವನ ಹಿಂದೆಯೇ ನಡೆದು, ಆನಂತರ ಅವನ ಮುಂಭಾಗಕ್ಕೆ ನೆಗೆದು, ಕೂಡಲೆ ತಿರುಗಿ ಅವನ ಮೇಲೆ ಬೀಳಬೇಕು. ತನ್ನ ಬಡ ಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಹುಲಿ ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿಯಿತು.
ಪ್ರಶ್ನೆಗಳು :
1. ಶಾನುಭೋಗರನ್ನು ಕಂಡು ಪರಮಾನಂದಗೊಂಡ ಹುಲಿಯ ಆನಂದಕ್ಕೆ ಕೊರತೆಯುಂಟಾಗಲು ಕಾರಣವೇನು? ಏಕೆ?
2. ಹುಲಿಯು ಬೆಕ್ಕಿನಂತೆ ಮೆಲ್ಲನೆ ಶಾನುಭೋಗರ ಹತ್ತಿರ ಸರಿಯುವಾಗ ಮನದಲ್ಲಿ ಏನೆಂದು ಆಲೋಚಿಸಿತು?
ಉತ್ತರಗಳು :
1. ಶಾನುಭೋಗರು ಹುಲಿಗೆ ಅಭಿಮುಖವಾಗಿ ನಡೆಯದೆ ಬೆನ್ನುತಿರುಗಿಸಿ ನಡೆಯುತ್ತಿದ್ದುದರಿಂದ ಹುಲಿಯ ಆನಂದಕ್ಕೆ ಕೊರತೆಯುಂಟಾಯಿತು. ಏಕೆಂದರೆ ಭರತಖಂಡದ ಹುಲಿಗಳು ಯಾರನ್ನೇ ಆಗಲಿ ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನೇ ಆದರೂ ಸರಿ ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ.
2. ಹುಲಿಯು ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು. ಆದರೆ ಅವರನ್ನು ಹಾದು ಮುಂದೆ ಬರುವುದು ಕಷ್ಟ. ಆದ್ದರಿಂದ ನಿಶ್ಶಬ್ದವಾಗಿ ಅವನ ಹಿಂದೆಯೇ ನಡೆದು, ಆನಂತರ ಅವನ ಮುಂಭಾಗಕ್ಕೆ ನೆಗೆದು, ಕೂಡಲೆ ತಿರುಗಿ ಮೇಲೆ ಬೀಳಬೇಕು ಎಂದು ಯೋಚಿಸುತ್ತ ಮೆಲ್ಲನೆ ಶಾನುಭೋಗರ ಹಿಂದೆ ಸರಿಯಿತು.
ದ್ಯವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುವುದು.
ಪದ್ಯಭಾಗ
ಪದ್ಯಪಾಠ - 1
ಎಮ್ಮ ನುಡಿಗೇಳ್ - ಪಂಪ
ನೀನುಳ್ಳೊಡೆಲ್ಲರೊಳರೆಮ
ಗೇನುಮಳಲ್ ಮನದೊಳಿಲ್ಲದೆಂತೆನೆ ಮಗನೆ |
ಭಾನುವೆ ಸಾಲದೆ ಪಗಲೆನಿ
ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ ||
ಅದಲ್ಲದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕಯ್ದುದೆನೆ ಬೆಸಕಯ್ವರೆಂದುದಂ ಮೀರುವರಲ್ಲರ ವರನಾನೆಂತುಮೊಡಂಬಡಿಸಿ ನೀನೆಚಿದುದನೆನಿಸುವೆನಿದಕರ್ೆ ಮಾಕರ್ೊಳ್ಳದೊಡಂಬಡು ನಿನ್ನಂ ಕಯ್ಯನೊಡ್ಡಿ ಬೇಡಿದಪ್ಪೆನೆಂದ ಧೃತರಾಷ್ಟ್ರನ ನ್ಮಡಿಗನುಬಲಮಾಗಿ ಗಾಂಧಾರಿಯಿಚಿತೆಂದಳ್ -
ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ
ಧುರಮೆ ಕರುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ |
ರ್ಮರನುಳಿವಂತೆ ನೀನುಳಿದೆಯಿನ್ನಿರಿವನ್ನರುಮಿಲ್ಲ ಮುತ್ತರುಂ
ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್ ||
ಪ್ರಶ್ನೆಗಳು :
1. ಧೃತರಾಷ್ಟ್ರನು ನಮ್ಮ ಮನಸ್ಸಿನಲ್ಲಿ ದುಃಖವಿಲ್ಲ ಎನ್ನಲು ಕಾರಣವೇನು?
2. ಮದಾಂಧಗಂಧಸಿಂಧುರ ಎಂದು ಯಾರಿಗೆ ಹೋಲಿಸಲಾಗಿದೆ?
3. ಪದ್ಯದಲ್ಲಿ ನಿಮಗಿಷ್ಟವಾದ ಸಾಲು ಯಾವುದು?
4. ಆ ಸಾಲುಗಳನ್ನು ಏಕೆ ಮೆಚ್ಚುವಿರಿ ? ನಿಮ್ಮ ಮಾತುಗಳಲ್ಲಿ ಬರೆಯಿರಿ.
(ವಿದ್ಯಾರ್ಥಿಯು ಸ್ವಾಭಿಪ್ರಾಯದ ಸಾಲನ್ನು ಬರೆಯಬಹುದು)
ಉತ್ತರಗಳು :
1. ನೀನೊಬ್ಬನಿದ್ದರೆ ನಮಗೆ ಎಲ್ಲರೂ ಇದ್ದಂತೆಯೇ ಆದ್ದರಿಂದ ನಮ್ಮ ಮನಸ್ಸಿನಲ್ಲಿ ಯಾವುದೇ ದುಃಖವಿಲ್ಲ ಎನ್ನುತ್ತಾನೆ.
2. . ಮದಾಂಧಗಂಧಸಿಂಧುರ ಎಂದು ಪವನನಂದನನಿಗೆ (ಭೀಮನಿಗೆ) ಹೋಲಿಸಲಾಗಿದೆ.
3. ಭಾನುವೆ ಸಾಲದೆ ಪಗಲೆನಿತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ
4. `ಪುತ್ರಶೋಕಂ ನಿರಂತರಂ' ಎಂಬಂತೆ ಇದುವರೆವಿಗಿನ ಯುದ್ಧದಲ್ಲಿ ಧೃತರಾಷ್ಟ್ರನ ತೊಂಬತ್ತೊಂಬತ್ತು ಮಕ್ಕಳು ಹತರಾಗಿದ್ದಾರೆ. ಉಳಿದ ಒರ್ವ ಮಗನಾದರೂ ಉಳಿಯಲಿ ಎಂದು ಹಂಬಲಿಸುವುದು ಸಹಜವಾಗಿದೆ. ದುರ್ಯೋಧನನನ್ನು ಭೀಮನಿಗೆ ಹೋಲಿಸಿ ಸಮರ್ಥಿಸಿಕೊಂಡಿರುವುದು ಸಮಂಜಸವಾಗಿದೆ.
ಗದ್ಯಪಾಠ - 7
ವೃಕ್ಷಸಾಕ್ಷಿ - ದುರ್ಗಸಿಂಹ
ವ|| ಮನುಷ್ಯರ ಸುಕೃತ ದುಷ್ಕೃತಂಗಳು ದೈವಗಳರಿಗುಮದರಿಂದೀ ಸಾಕ್ಷಿಯುಮುಚಿತಂ. ಮರನಂ ನುಡಿಸುವುದು ಪರಮಗಹನಮೀ ಸಾಕ್ಷಿಯಂ ಕೈಕೊಳ್ವುದೆನೆ ಧರ್ಮಬುದ್ಧಿ ಕರಮೊಳ್ಳಿತ್ತು ಕೈಕೊಂಡೆನೆನೆ ಧರ್ಮಾಧಿಕರಣದವರಂದು ಪೊಳ್ತು ಪೋದುದು, ನಾಳೆ ಪೋಗಿ ಕೇಳ್ವಮೆನೆ ತಮ್ಮ ತಮ್ಮ ಮನೆಗೆಲ್ಲರುಂ ಪೋದರ್, ಅನ್ನೆಗಂ ದುಷ್ಟಬುಧ್ಧಿಯುಂ ತನ್ನ ಮನೆಗೆ ಬಂದು ತಮ್ಮಯ್ಯನ ಕೈಯಂಪಿಡಿದು ಕಟ್ಟೇಕಾಂತಕುಯ್ದು ತದ್ವೃತ್ತಾಂತಮೆಲ್ಲಮಂ ತಿಳಿಯೆ ಪೇಳ್ದು ನಿಮ್ಮೊಂದು ವಚನಮಾತ್ರದಿಂ ನಮ್ಮ ಪರಿಗ್ರಹಮೆಲ್ಲಂ ಪಲವು ಕಾಲಂ ಪಸಿಯದುಂಡು ಬಾಳ್ವಂತರ್ಥಂ ಸಾರ್ದಪುದು ನೀವಾ ಮರದ ಪೊಳಲೊಳಡಂಗಿರ್ದು ಧರ್ಮಬುದ್ಧಿಯೇ ಪೊನ್ನಂ ಕೊಂಡುಯ್ದನೆಂದು ನುಡಿಯಿಮೆಂಬುದು ಮಾತನಿಂತೆಂದಂ
ಪರಧನಹರಣಮುಂ ವಿಶ್ವಾಸಘಾತುಕಮುಂ ಸ್ವಾಮಿದ್ರೋಹಮುಂ ಇವೆಲ್ಲಮೇಗೆಯ್ದುಂ ಕಿಡಿಸುಗುಮಿಂತಪ್ಪುಗೆಲ್ಲಮಂ ನಿನರಿದಿದರ್ೆನ್ನುಮಂ ಸಾಕ್ಷಿ ಮಾಡಿ ನುಡಿಸಿ ಕಿಡಿಸಲ್ಬಗೆದೆ, ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ ಎನಲ್ ದುಷ್ಟಬುದ್ಧಿ ಕೇಳ್ದು ನಮ್ಮ ನಿರ್ವಾಹಮಂ ಕಿಡಿಸದೆನ್ನಂದುದಂ ಗೆಯ್ಯೆಂದು ತನ್ನ ತಂದೆಯನೊಡಂ ಬಡಿಸುತ್ತಿರ್ಪಿನಮಾದಿತ್ಯನಪರ ಗಿರಿಯನೆಯ್ದುವುದುಂ
ಪ್ರಶ್ನೆಗಳು :
1. ದುಷ್ಟಬುದ್ಧಿಯು ಏಕಾಂತದಲ್ಲಿ ತನ್ನ ತಂದೆಗೆ ಏನೆಂದು ಹೇಳಿದನು?
2. ದುಷ್ಟಬುದ್ಧಿಯು ತನ್ನ ತಂತ್ರವನ್ನು ಹಾಳುಮಾಡಬೇಡವೆಂದು ತಂದೆಯನ್ನು ಒತ್ತಾಯ ಮಾಡಲು ಕಾರಣವೇನು?
ಉತ್ತರಗಳು :
1. ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತಂದೆಯ ಕೈ ಹಿಡಿದು ಏಕಾಂತದಲ್ಲಿ ತನ್ನ ವೃತ್ತಾಂತವನ್ನೆಲ್ಲ ತಿಳಿಸುತ್ತ, ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವು ಪರಿಹಾರವಾಗುವುವು. ಹಲವುಕಾಲ ನಮ್ಮ ಮನೆಯವರು ಹಸಿಯದೆ ತಿಂದುಂಡು ಜೀವನ ಸಾಗಿಸುವಷ್ಟು ಧನ ಸಿಗುತ್ತದೆ ಆದ್ದರಿಂದ ನೀವು ಆ ಮರದೊಳಗಿದ್ದು ಧರ್ಮಬುದ್ಧಿಯೇ ಹೊನ್ನನ್ನು ಕೊಂಡುಹೋದನೆಂದು ನುಡಿಯಬೇಕು ಎಂದು ಹೇಳಿದನು.
2. ಧರ್ಮಬುದ್ಧಿಯೇ ಚಿನ್ನವನ್ನು ಕದ್ದಿದ್ದಾನೆಂದು ಹೇಳು ಎಂದು ತನ್ನ ತಂದೆಗೆ ಹೇಳಿದಾಗ ಅವನು ಪರರ ಹಣವನ್ನು ಕಳ್ಳತನ ಮಾಡುವುದು, ವಿಶ್ವಾಸಘಾತಕ ಕಾರ್ಯವನ್ನೆಸಗುವುದು, ಸ್ವಾಮಿದ್ರೋಹವನ್ನುಂಟು ಮಾಡುವುದು ಇವೆಲ್ಲವು ನಮ್ಮ ಬದುಕನ್ನು ಹಾಳುಮಾಡುತ್ತವೆ. ಇದನ್ನು ತಿಳಿದು ನನ್ನನ್ನು ಸಾಕ್ಷಿ ಹೇಳುವಂತೆ ಒತ್ತಾಯ ಮಾಡುವುದು ನಮ್ಮ ಕುಲವನ್ನೇ ನಾಶ ಮಾಡುವ ಬಗೆಯಾಗಿದೆ ಎಂದಾಗ ನಾನು ಹೇಳಿದುದುದನ್ನೇ ಮಾಡು ಎಂದು ದುಷ್ಟಬುದ್ಧಿಯು ತಂದೆಯನ್ನು ಒತ್ತಾಯಿಸಿದನು.
Comments :
Post a Comment