ಹಲಗಲಿ ಬೇಡರು

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲

                                     

      

     ಪದ್ಯಪಾಠ - 3                                                                                           ಹಲಗಲಿ ಬೇಡರು

ಕವಿ-ಕೃತಿ ಪರಿಚಯ : ಇದು ಜನಪದ ಸಾಹಿತ್ಯದ ವಿಶಿಷ್ಟ ಪ್ರಕಾರಗಳಲ್ಲಿ ಒಂದಾದ ಲಾವಣಿಯಾಗಿದೆ. ಲಾವಣಿಗಳು ವೀರತನ ಸಾಹಸವನ್ನು ವರ್ಣಿಸುವುದರಿಂದ ವೀರಗೀತೆಗಳೆಂದೂ ಸಹ ಕರೆಯುತ್ತಾರೆ. ಲಾವಣಿಗಳು ಗದ್ಯದ ಹೊಳಪನ್ನು ಹಾಗೂ ಭಾವಗೀತೆಯ ಸತ್ವವನ್ನು ಒಳಗೊಂಡಿವೆ.ಪ್ರಸ್ತುತ ಲಾವಣಿಯನ್ನು ಡಾ|| ಗದ್ದಗಿಮಠರವರು ಸಂಪಾದಿಸಿರುವ 'ಕನ್ನಡ ಜನಪದ ಗೀತೆಗಳು ' ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ.

ಅ] ಒಂದು ವಾಕ್ಯದಲ್ಲಿ ಉತ್ತರಿಸಿ.

1. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?

ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಿಬೇಕು ಎಂಬ ಆದೇಶ ಹೊರಡಿಸಿತು.

2. ಹಲಗಲಿಯ ನಾಲ್ವರು ಪ್ರಮುಖರು ಯಾರು?

ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರುಹಲಗಲಿಯ ಪ್ರಮುಖರು.

3 ಹಲಗಲಿಯ ಗುರುತು ಉಳಿಯದಂತಾದದು ಏಕೆ?

ಹಲಗಲಿಯ ಮೇಲೆ ಬಿಚಿಟಿಷ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು  ಉಳಿಯದಂತಾಯಿತು.

4. ಯಾವ ಘಟನೆ ಹಲಗಲಿ ಲಾವಣಿಗ ಕಾರಣವಾಗಿದೆ?

ಹಲಗಲಿಯ ಬೇಡರ ಹತಾರ ಕದನ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.

5. ಹಲಗಲಿ ಗ್ರಾಮ ಎಲ್ಲಿದೆ?

ಹಲಗಲಿ ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಆ] ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಹಲಗಲಿಯ ಬೇಡರು ದಂಗ ಏಳಲು ಕಾರಣವೇನು?

ಕ್ರಿ.ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿತು. ಈ ಆದೇಶವನ್ನು ವಿರೋಧಿಸಿ ಹಲಗಲಿಯ ಬೇಡರು ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ ರಾಮ, ಭೀಮ ಮೊದಲಾದ ವೀರರ ನಾಯಕತ್ವದಲ್ಲಿ ಸಭೆ ಸೇರಿ ತಮ್ಮ ಬದುಕಿನ ಆಧಾರವಾದ ಆಯುಧಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಒಪ್ಪಲಿಲ್ಲ. ಆದರೆ ಬ್ರಿಟಿಷ್ ಸಿಪಾಯಿಗಳು ಬಂದು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು. ಇದು ಹಲಗಲಿಯ ಬೇಡರು ದಂಗೆ ಏಳಲು ಕಾರಣವಾಯಿತು.

2. ಹಲಗಲಿಗೆ ದಂಡು ಬರಲು ಕಾರಣವೇನು?

ಹಲಗಲಿಯ ಬೇಡರಾದ ಪೂಜೇರಿ ಹನುಮ, ಬ್ಯಾಡರ ಬಾಲ, ರಾಮ, ಜಡಗ ಇವರುಗಳು ಬ್ರಿಟಿಷ್ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದರು. ಈ ದಂಗೆಯನ್ನು ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು ಇದರಿಂದ ಕೋಪಗೊಂಡ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಯ ಬೇಡರ ದಂಗೆಯನ್ನು ಬಗ್ಗುಬಡಿಯಲು ದಂಡನ್ನು ಕರೆಯಿಸಿದರು.

3. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?

ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು. ಬ್ರಿಟಿಷರು ದಂಡಿನ ಸಿಪಾಯಿಗಳು ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದರು. ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು. ಬ್ರಿಟಿಷ್ ಸಿಪಾಯಿಗಳ ಗುಂಡಿಗೆ ಹೆದರಿ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿ ತಲೆಮರೆಸಿಕೊಂಡರು.

4. ಲಾವಣಿಗಳನ್ನು ಏಕ ವೀರಗೀತೆಗಳು ಎನ್ನಲಾಗಿದೆ?

ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಒಂದು ಘಟನೆಯನ್ನು ಆದರಿಸಿ, ಕಥನಾತ್ಮಕವಾಗಿ ಕಟ್ಟಿದ ಹಾಡನ್ನು ಲಾವಣಿಗಳೆನ್ನುವರು. ಲಾವಣಿಗಳು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನುವರು.

ಇ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?

1857 ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ನಂತರ ಬ್ರಿಟಿಷರು ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು. ಅದರ  ಪ್ರಕಾರ  ಭಾರತೀಯರು  ಬ್ರಿಟಿಷರ  ಅನುಮತಿಯಿಲ್ಲದೆ  ಆಯುಧಗಳನ್ನು  ಹೊಂದುವ  ಹಾಗಿರಲಿಲ್ಲ.  ಮತ್ತು  ಈಗಾಗಲೇ  ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು. ಹಲಗಲಿ ಬೇಡರಿಗೆ ಆಯುಧಗಳೆ ಜೀವವಾಗಿತ್ತು. ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ, ಬಾಲ, ಜಡಗ, ರಾಮರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆ ಎದ್ದರು. ಸಿಪಾಯಿಗಳ ಕೆನ್ನೆಗೆ ಬಾರಿಸಿದರು. ಮನವೊಲಿಸಲು ಬಂದ ಹೆಬಲಕ್ ಎಂಬ ಅಧಿಕಾರಿಯನ್ನು ಕೊಂದರು. ಕೋಪಗೊಂಡ ಕಂಪನಿಯ ಸರಕಾರ ಬೇಡರನ್ನು ಕಂಡಕಂಡಲ್ಲಿ ಸಾಯಿಸಿತು. ಬೇಡರ ಮುಖಂಡರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಯಿತು. ಹಲಗಲಿ ಊರನ್ನು ಲೂಟಿಮಾಡಿ ಬೆಂಕಿ ಹಚ್ಚಲಾಯಿತು. ಹೀಗೆ ಹಲಗಲಿ ದಂಗೆಯನ್ನು ಸರಕಾರ ನಿಯಂತ್ರಿಸಿತು.

2. ಹಲಗಲಿ ದಂಗೆಯ ಪರಿಣಾಮವೇನು ?

1857 ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ನಂತರ ಬ್ರಿಟಿಷರು ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು. ಅದರ  ಪ್ರಕಾರ  ಭಾರತೀಯರು  ಬ್ರಿಟಿಷರ  ಅನುಮತಿಯಿಲ್ಲದೆ  ಆಯುಧಗಳನ್ನು  ಹೊಂದುವ  ಹಾಗಿರಲಿಲ್ಲ  ಮತ್ತು  ಈಗಾಗಲೇ  ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು. ಹಲಗಲಿ ಬೇಡರಿಗೆ ಆಯುಧಗಳೆ ಜೀವವಾಗಿತ್ತು. ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ, ಬಾಲ, ಜಡಗ, ರಾಮರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆ ಎದ್ದರು. ಸಿಪಾಯಿಗಳ ಕೆನ್ನೆಗೆ ಬಾರಿಸಿದರು. ಬೇಡರ ಮನವೊಲಿಸಲು ಬಂದ ಅಧಿಕಾರಿಯನ್ನೇ ಕೊಂದು ಹಾಕಿದರು. ಕ್ರೋಧಗೊಂಡ ಕಾರಾಸಾಹೇಬನ ಆದೇಶದಂತೆ ಕಂಪನಿಯ ದಂಡು ಬೇಡರನ್ನು ಕಂಡ ಕಂಡಲ್ಲಿ  ಬೇಟೆಯಾಡಿತು.  ಹನುಮ,  ಭೀಮ,  ಜಡಗ  ರಾಮ,  ಬಾಲರು  ಮಾಡಿದ  ಪ್ರಯತ್ನ  ವಿಫಲವಾಯಿತು.  ನಿರ್ದಯವಾಗಿ  ಅವರನ್ನು ಸಾಯಿಸಲಾಯಿತು. ಬೇಡರ ಊರನ್ನು ಏನೂ ಉಳಿಸದಂತೆ ಲೂಟಿ ಮಾಡಲಾಯಿತು. ಊರಿಗೆ ಬೆಂಕಿ ಇಟ್ಟು ಗುರುತು ಸಿಗದಂತೆ ಬೂದಿ ಮಾಡಲಾಯಿತು.

ಈ] ಸಂದರ್ಭಾನುಸಾರ ಸ್ವಾರಸ್ಯ ವಿವರಿಸಿ.

1. ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ

ಆಯ್ಕೆ :-ಈ ವಾಕ್ಯವನ್ನು ಡಾ. ಬಿ.ಎಸ್.ಗದ್ದಗಿಮಠ ಅವರು ಸಂಪಾದಿಸಿರುವ 'ಕನ್ನಡ ಜನಪದ ಗೀತೆಗಳು' ಕೃತಿಯಿಂದ ಆಯ್ದ 'ಹಲಗಲಿಯ ಬೇಡರು' ಎಂಬ ಲಾವಣಿಯಿಂದ ಆರಿಸಲಾಗಿದೆ.

ಸಂದರ್ಭ :- ಕ್ರಿ.ಶ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ  :-  ಭಾರತೀಯರ ಮೇಲಿನ ಬ್ರಿಟಿಷರ ದರ್ಪ ಈ ಮಾತಿನಲ್ಲಿ ವ್ಯಕ್ತಗೊಂಡಿದೆ. ಇದೇ ಹಲಗಲಿ ದಂಗೆಯ ಜ್ವಾಲೆ ಹೆಚ್ಚಾಗಲು ಕಾರಣವಾಯಿತು.

2. ಜೀವ ಸತ್ತು ಹೋಗುವುದು ಗೊತ್ತ

ಸಂದರ್ಭ :- ಬ್ರಿಟಿಷರ ಆಜ್ಞೆಯನ್ನು ಹೊರಡಿಸಿ, ಜನರಿಂದ ಆಯುಧಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಹಲಗಲಿಯ ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ, ನೀಡಿದರೆ ತಾವು ಸತ್ತಂತೆ ಎಂದು ಹೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ :- ಹಲಗಲಿಯ ಬೇಡರು ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದುದು ಎಂಬ ಭಾವನೆಯನ್ನು ಹೊಂದಿದ್ದರು ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

3. ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ

ಸಂದರ್ಭ :- ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು. ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದು, ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ :- ಹಲಗಲಿಯ ಬೇಡರ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿಕೊಲ್ಲುವ ಬ್ರಿಟಿಷರ ಕ್ರೌರ್ಯದ ಪರಮಾವಧಿಯನ್ನು ಈ ಮಾತಿನಲ್ಲಿ ವರ್ಣಿಸಲಾಗಿದೆ.

4. ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು

ಸಂದರ್ಭ :- ಬ್ರಿಟಿಷ್ ಸೈನಿಕರು ಹಲಗಲಿಯನ್ನು ಲೂಟಿಮಾಡಿ, ಬೆಂಕಿ ಹಚ್ಚಿ ನಾಶಗೊಳಿಸಿದರು ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ :- ಹಲಗಲಿಯ ಬೇಡರ ಮೇಲಿನ ಬ್ರಿಟಿಷರ ದೌರ್ಜನ್ಯವು ವರ್ಣಿಸಲು ಅಸಾಧ್ಯವಾದುದು ಎಂದು ಲಾವಣಿಕಾರನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.

ಉ]ಬಟ್ಟ ಸ್ಥಳ ತುಂಬಿರಿ.

1. ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ  ಲಾವಣಿ          

2. ಹಲಗಲಿಯ ಜಿಲ್ಲಾ ಸ್ಥಾನವಾಗಿದ್ದ ಸ್ಥಳ ಕಲಾದಗಿ

3. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಯಸ್ತ್ರೀಕರಣ           

 4. ಲಾವಣಿಕಾರ ಅಂಕಿತಗೊಳಿಸಿದ ದೈವ  ಕಲ್ಮೇಶ.

5. ವಿಲಾತಿ ಪದದ ಸಮನಾರ್ಥಕ ಪದ  ವಿಲಾಯತಿ.

1. ಪದಗಳನ್ನು ವಿಗ್ರಹಿಸಿ ಸಮಾಸ ಹೆಸರಿಸಿ.

ಮುಂಗೈ = ಕೈಯ + ಮುಂದು = ಅಂಶಿಸಮಾಸ

ಭಾಷಾ ಚಟುವಟಿಕನಡು ರಾತಿ = ರಾತ್ರಿಯ +ನಡುವೆ = ಅಂಶಿ ಸಮಾಸ

ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ

ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ

2. ಗ್ರಾಮ್ಯ ಪದಗಳಿಗ ಗ್ರಂಥಸ್ಥ ರೂಪ ಬರೆಯಿರಿ.

ಹೀಂಗ-ಹೀಗೆ, ಮ್ಯಾಗ-ಮೇಲೆ, ಕಳುವ್ಯಾರೆ-ಕಳಿಸಿದರು, ಇಲ್ಲದಂಗ-ಇಲ್ಲದ ಹಾಗೆ, ಇಸವಾಸ-ವಿಶ್ವಾಸ, ಸಕ್ಕಾರಿ-ಸಕ್ಕರೆ.

3. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ''ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ''.

ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು       ಉಪಮಾನ : ಮುಂಗಾರಿನ ಸಿಡಿಲು

ಉಪಮಾವಾಚಕ : ಹಾಂಗ (ಹಾಗೆ)                   ಸಮಾನಧರ್ಮ : ಸಿಡಿಯುವುದು

ಅಲಂಕಾರ : ಉಪಮಾಲಂಕಾರ

ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಆ) ''ಸಿಡಿಲ ಸಿಡಿದಾಂಗ ಗುಂಡು ಸುರಿದಾವ ''.

ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)  ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)

ಉಪಮಾವಾಚಕ - ಹಾಂಗ (ಹಾಗೆ)                  ಸಮಾನ ಧರ್ಮ - ಸಿಡಿಯು ವುದು

ಅಲಂಕಾರ - ಉಪಮಾಲಂಕಾರ

ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

4. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.

ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು

ಅನ್ಯದೇಶ್ಯ _ ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ 

Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment