ಸಂಕಟಕೆ ಗಡಿ ಇಲ್ಲ

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲

       ಪದ್ಯಪಾಠ - 8.    
                    ಸಂಕಟಕೆ ಗಡಿ ಇಲ್ಲ                                                   - ದುರ್ಗಪ್ಪ ಸರಸ್ವತಿ

1. ಗೆರೆ ಎಳೆದು 'ಗಡಿ' ಎಂದ
ಆಯ್ಕೆ :- ಈ ವಾಕ್ಯವನ್ನು ಶ್ರೀಮತಿ ದು. ಸರಸ್ವತಿ ಅವರು ರಚಿಸಿರುವ 'ಹೆಣೆದರೆ ಜೇಡನಂತೆ' ಕೃತಿಯಿಂದ ಆಯ್ದ 'ಸಂಕಟಕೆ ಗಡಿ ಇಲ್ಲ' ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :-  ಮಾನವನು ಭೂಮಿಯ ಮಾಲೀಕನಾದೆನೆಂಬ ಅಮಲಿನಲ್ಲಿ ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನು ನಿರ್ಮಿಸಿಕೊಂಡನು ಎಂದು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :-  ಎಲ್ಲ ಪ್ರಾಣಿಗಳಿಗೂ ಸಮಾನವಾಗಿ ಸೇರಬೇಕಾದ ಭೂಮಿಯ ಮೇಲೆ ಮಾನವನು ಅಹಂಕಾರದಿಂದ ಗೆರೆ ಎಳೆದು ಗಡಿ ನಿರ್ಮಿಸಿ ಅಸಮಾನತೆಗೆ ಕಾರಣನಾಗಿದ್ದಾನೆ ಎಂಬುದನ್ನು ಕವಿಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿದ್ದಾರೆ.

2. ಜೀವಗಳು ಶವವಾದವು
ಆಯ್ಕೆ :- ಈ ವಾಕ್ಯವನ್ನು ಶ್ರೀಮತಿ ದು. ಸರಸ್ವತಿ ಅವರು ರಚಿಸಿರುವ 'ಹೆಣೆದರೆ ಜೇಡನಂತೆ' ಕೃತಿಯಿಂದ ಆಯ್ದ 'ಸಂಕಟಕೆ ಗಡಿ ಇಲ್ಲ' ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :-  ಮಾನವನು ಭೂಮಿಯ ಮಾಲೀಕನಾದೆನೆಂಬ ಅಮಲಿನಲ್ಲಿ ಭೂಮಿಯ ಮೇಲೆ ಗೆರೆ ಎಳೆದು ಗಡಿಯನ್ನುನಿರ್ಮಿಸಿಕೊಂಡು, ಅದರ ರಕ್ಷಣೆಗಾಗಿ ಯುದ್ಧ ಮಾಡುತ್ತಿದ್ದಾನೆ ಎಂದು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :-  ಮಾನವನು ತಾನೇ ಅಹಂಕಾರದಿಂದ ನಿರ್ಮಿಸಿಕೊಂಡ ಗಡಿಯ ರಕ್ಷಣೆಯ ನೆಪದಲ್ಲಿ ಯುದ್ಧ ಮಾಡಿದ್ದರಿಂದ ನಿರಪರಾಧಿಗಳು ಪ್ರಾಣ ಕಳೆದುಕೊಂಡರು ಎಂಬುದನ್ನು ಕವಿಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿದ್ದಾರೆ.

3. ಗಡಿಯ 'ಮ್ಯಾಜಿಕ್'ನಿಂದ ಜೀವತೆತ್ತವರು
ಆಯ್ಕೆ :- ಈ ವಾಕ್ಯವನ್ನು ಶ್ರೀಮತಿ ದು. ಸರಸ್ವತಿ ಅವರು ರಚಿಸಿರುವ 'ಹೆಣೆದರೆ ಜೇಡನಂತೆ' ಕೃತಿಯಿಂದ ಆಯ್ದ 'ಸಂಕಟಕೆ ಗಡಿ ಇಲ್ಲ' ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :-  ಮಾನವನು ತಾನೇ ಅಹಂಕಾರದಿಂದ ನಿರ್ಮಿಸಿಕೊಂಡ ಗಡಿಯ ರಕ್ಷಣೆಯ ನೆಪದಲ್ಲಿ ಯುದ್ಧ ಮಾಡಿದ್ದರಿಂದ ನಿರಪರಾಧಿಗಳು ಪ್ರಾಣ ಕಳೆದುಕೊಂಡರು ಎಂದು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಗಡಿಯ ರಕ್ಷಣೆಗಾಗಿ ಪ್ರಾಣಕೊಟ್ಟವರು ವೀರಮರಣ ಹೊಂದಿದರು; ಆದರೆ ಜೀವ ತೆಗೆದವರು ವೀರಯೋಧರಾದರು ಎನ್ನುವುದು ಒಂದು ಮ್ಯಾಜಿಕ್ಎಂಬುದನ್ನು ಕವಿಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿದ್ದಾರೆ.

4. ಗಡಿಯೂ ಇಲ್ಲ ಆಚೆ ಈಚೆಯೂ ಇಲ್ಲ
ಆಯ್ಕೆ :- ಈ ವಾಕ್ಯವನ್ನು ಶ್ರೀಮತಿ ದು. ಸರಸ್ವತಿ ಅವರು ರಚಿಸಿರುವ 'ಹೆಣೆದರೆ ಜೇಡನಂತೆ' ಕೃತಿಯಿಂದ ಆಯ್ದ 'ಸಂಕಟಕೆ ಗಡಿ ಇಲ್ಲ' ಪದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ :-  ಮಾನವನು ಗರ್ವಪಟ್ಟು ತಾನು ನಿರ್ಮಿಸಿಕೊಂಡ ಗಡಿಯ ರಕ್ಷಣೆಗಾಗಿ ಯುದ್ಧ ಮಾಡಿದ್ದರಿಂದ ಗಡಿ ಆಚೆ - ಈಚೆ ಅನೇಕ ಜೀವಗಳು ಹೋರಾಡಿ ಶವವಾದವು ಎಂದು ವರ್ಣಿಸುವ ಸಂದರ್ಭದಲ್ಲಿ ಕವಿಗಳು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :-  ಗಡಿಯ ಎರಡು ಕಡೆಯವರು ಅನುಭವಿಸುವ ಒಡಲಿನ ನೋವು, ಸಂಕಟ ಒಂದೇ ತೆರನಾದುದು. ಆದ್ದರಿಂದ ಸಂಕಟಕೆ ಗಡಿ ಇಲ್ಲ ಎಂಬುದನ್ನು ಕವಿಗಳು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಿದ್ದಾರೆ

Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment