ಧರ್ಮಸಮದೃಷ್ಟಿ

How to Download Files in Inyatrust :

Step By Step with Image | Watch Video

Please Wait
Your File/visit link Generating
Click the below link
▼▼▼▼▼▼▼▼▼▼
▲▲▲▲▲▲▲▲▲▲

  ಗದ್ಯಪಾಠ - 4 

    ಧರ್ಮಸಮದೃಷ್ಟಿ.                                            - ಶಾಸನ (ಸಂಗ್ರಹ)

1. ಪಾಷಂಡ ಸಾಗರ ಮಹಾಬಡವಾಮುಖಾಗ್ನಿಃ
ಆಯ್ಕೆ :- ಈ ವಾಕ್ಯವನ್ನು ಶ್ರೀ ಬಿ. ಎಂ.ಶ್ರೀ ಅವರು ಸಂಪಾದಿಸಿರುವ 'ಕನ್ನಡ ಬಾವುಟ' ಕೃತಿಯಿಂದ ಆಯ್ದ 'ಧರ್ಮಸಮದೃಷ್ಟಿ' ಶಾಸನದಿಂದ ಆರಿಸಲಾಗಿದೆ.
ಸಂದರ್ಭ :- ವಿಜಯನಗರ ಸಾಮ್ರಾಜ್ಯದ ರಾಜ ವೀರಬುಕ್ಕರಾಯನ ಕಾಲದ 'ಧರ್ಮಸಮದೃಷ್ಟಿ' ಶಾಸನದ ಪ್ರಾರಂಭದಲ್ಲಿ ಶ್ರೀರಾಮಾನುಜಾಚಾರ್ಯರನ್ನು ಸ್ಮರಿಸುವ ಸಂದರ್ಭದಲ್ಲಿ ಶಾಸನಕಾರನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಸಮುದ್ರ ಮಧ್ಯದಲ್ಲಿ ಬಡಬಾನಲ ಇರುವಂತೆ ನಾಸ್ತಿಕರ ನಡುವೆ ಶ್ರೀರಾಮಾನುಜಾಚಾರ್ಯರು ಆಸ್ತಿಕರಾಗಿ ಶೋಭಿಸುತ್ತಿದ್ದರು ಎಂಬುದನ್ನು ಈ ಮಾತಿನಲ್ಲಿ ಬಹುಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.

2. ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀವೈಷ್ಣವರು ಶಾಸನವ ನಟ್ಟು ಪಾಲಿಸುವರು
ಆಯ್ಕೆ :- ಈ ವಾಕ್ಯವನ್ನು ಶ್ರೀ ಬಿ. ಎಂ.ಶ್ರೀ ಅವರು ಸಂಪಾದಿಸಿರುವ 'ಕನ್ನಡ ಬಾವುಟ' ಕೃತಿಯಿಂದ ಆಯ್ದ 'ಧರ್ಮಸಮದೃಷ್ಟಿ' ಶಾಸನದಿಂದ ಆರಿಸಲಾಗಿದೆ.
ಸಂದರ್ಭ :- ರಾಜನಾದವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು, ಅವರ ಕೈಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಶ್ರೀವೈಷ್ಣವರು ಜೈನ ಬಸದಿಗಳನ್ನು ಗೌರವಿಸಬೇಕು ಎಂದು ಶಾಸನ ಬರೆಸಿರುವುದರಲ್ಲಿ ರಾಜನಾದ ವೀರಬುಕ್ಕರಾಯನ ಧರ್ಮಸಮದೃಷ್ಟಿಯನ್ನು ಕಾಣಬಹುದಾಗಿದೆ.

3. ಮಿಕ್ಕ ಹೊನ್ನಿಂಗೆ ಜೀರ್ಣಜಿನಾಲಯಂಗಳಿಗೆ ಸೊದೆಯನಿಕ್ಕುವುದು.
ಆಯ್ಕೆ :- ಈ ವಾಕ್ಯವನ್ನು ಶ್ರೀ ಬಿ. ಎಂ.ಶ್ರೀ ಅವರು ಸಂಪಾದಿಸಿರುವ 'ಕನ್ನಡ ಬಾವುಟ' ಕೃತಿಯಿಂದ ಆಯ್ದ 'ಧರ್ಮಸಮದೃಷ್ಟಿ' ಶಾಸನದಿಂದ ಆರಿಸಲಾಗಿದೆ.
ಸಂದರ್ಭ :- ರಾಜನಾದ ವೀರಬುಕ್ಕರಾಯನು ಜೈನಧರ್ಮದ ಸುಧಾರಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಸೂಚಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ಜೀರ್ಣಾವಸ್ಥೆಯಲ್ಲಿರುವ ಜಿನಾಲಯಗಳಿಗೆ ಸುಣ್ಣ ಬಳಿದು ಪುನಶ್ಚೇತನಗೊಳಿಸಬೇಕು ಎಂಬ ವಿಶಾಲ ಮನೋಭಾವನೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ.

4. ಈ ಮಾಡಿದ ಕಟ್ಟಳೆಯನು ಆವನೊಬ್ಬನು ಮೀರಿದವನು ರಾಜದ್ರೋಹಿಯಪ್ಪನು.
ಆಯ್ಕೆ :- ಈ ವಾಕ್ಯವನ್ನು ಶ್ರೀ ಬಿ. ಎಂ.ಶ್ರೀ ಅವರು ಸಂಪಾದಿಸಿರುವ 'ಕನ್ನಡ ಬಾವುಟ' ಕೃತಿಯಿಂದ ಆಯ್ದ 'ಧರ್ಮಸಮದೃಷ್ಟಿ' ಶಾಸನದಿಂದ ಆರಿಸಲಾಗಿದೆ.
ಸಂದರ್ಭ :- ರಾಜನಾದ ವೀರಬುಕ್ಕರಾಯನು ಶ್ರೀವೈಷ್ಣವರು ಹಾಗೂ ಜೈನರ ನಡುವೆ ಸಂಘರ್ಷವುಂಟಾದ ಸಮಯದಲ್ಲಿ ಸಭೆ ಕರೆದು, ಅವರ ಕೈಕೈ ಹಿಡಿಸಿ ಸಾಮರಸ್ಯದಿಂದ ಇರುವಂತೆ ಸೂಚಿಸಿ ಶಾಸನ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ :- ರಾಜನು ಮಾಡಿದ ಶಾಸನವನ್ನು ಯಾರು ಮೀರಬಾರದು; ಮೀರಿದರೆ ಅವರಿಗೆ ರಾಜದ್ರೋಹಿಗೆ ಆಗುವ ಶಿಕ್ಷೆಯು ಆಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ

Click the below button to download/visit link
▼▼▼▼▼▼▼▼▼▼
▲▲▲▲▲▲▲▲▲▲

Comments :

Post a Comment